ಮೋಹನ್ ಭಾಗವತ್‍ಜಿ ಸಮ್ಮುಖದಲ್ಲಿ ರಾಷ್ಟ್ರೀಯ ಮುಸ್ಲಿಂ ಮಂಚ್ ಸ್ಥಾಪನೆ: ಅರ್ಷದ್ ದಖನಿ

0
42

ಸುರಪುರ: ದೇಶದಲ್ಲಿ ಆರ್‍ಎಸ್‍ಎಸ್ ಸಂಘಟನೆಯಂತೆ ಅದರ ಅಂಗಸಂಸ್ಥೆಯಾಗಿ ರಾಷ್ಟ್ರೀಯ ಮುಸ್ಲಿಂ ಮಂಚ್ ಕಾರ್ಯನಿರ್ವಹಿಸುತ್ತಿದ್ದು,20 ವರ್ಷಗಳ ಹಿಂದೆ ಮೋಹನ್ ಭಾಗವತ್‍ಜಿ ಹಾಗು ರಾಷ್ಟ್ರೀಯ ಮುಖಂಡರಾದ ಇಂದ್ರೇಶ ಕುಮಾರ್‍ಜಿ ಅವರ ಸಮ್ಮುಖದಲ್ಲಿ ಸ್ಥಾಪನೆಗೊಂಡಿದೆ ಎಂದು ಮಂಚ್‍ನ ಜಿಲ್ಲಾಧ್ಯಕ್ಷ ಅರ್ಷದ್ ದಖನಿ ಮಾತನಾಡಿದರು.

ನಗರದ ಅದಿತಿ ಹೋಟೆಲ್‍ನಲ್ಲಿ ಶನಿವಾರ ಸಭೆ ನಡೆಸಿ ರಾಷ್ಟ್ರೀಯ ಮುಸ್ಲಿಂ ಮಂಚ್‍ನ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಕಗೊಳಿಸಿ ಮಾತನಾಡಿ,ರಾಷ್ಟ್ರೀಯ ಮುಸ್ಲಿಂ ಮಂಚ್ ಸಂಘಟನೆಯು ಇಡೀ ರಾಷ್ಟ್ರ ಮಟ್ಟದಲ್ಲಿರುವ ಸಂಘಟನೆಯಾಗಿದೆ,ಇದರಲ್ಲಿ ದೊಡ್ಡ ದೊಡ್ಡ ಮೌಲ್ವಿಗಳು ಹಾಗು ಅನೇಕ ಮುಖಂಡರುಗಳಿದ್ದಾರೆ.

Contact Your\'s Advertisement; 9902492681

ತಾವೆಲ್ಲರು ಏನೇ ಚಟುವಟಿಕೆ ಮಾಡಿದರು ಅದನ್ನು ಗ್ರುಪ್‍ಗಳ ಮೂಲಕ ತಿಳಿಸಿ,ಇದರಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅವರನ್ನು ಸಂಘಟನೆ ಗುರುತಿಸಿ ಅವರಿಗೆ ಹೆಚ್ಚಿನ ಜವಬ್ದಾರಿ ನೀಡುತ್ತದೆ.ಇದನ್ನು ಗಮನದಲ್ಲಿಟ್ಟುಕೊಂಡು ಇಡೀ ಜಿಲ್ಲೆಯಾದ್ಯಂತ ಸಮುದಾಯದ ಜನರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗೋಣ,ಜೊತೆಗೆ ದೇಶ ಸೇವೆಯಲ್ಲಿ ನಾವೆಲ್ಲರು ತೊಡಗುವ ಮೂಲಕ ಸಂಘಟನೆಯ ದ್ಯೇಯೋದ್ದೇಶಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡೋಣ ಅಲ್ಲದೆ,ಮುಂದಿ ದಿನಗಳಲ್ಲಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಡಾ: ಮಜೀದ್ ಅಹ್ಮದ್ ತಾಳಿಕೋಟೆ, ರಾಜ್ಯಾಧ್ಯಕ್ಷರಾದ ಇಲ್ಯಾಸ್ ಅಹ್ಮದ್ ಮೈಸೂರು ಅವರನ್ನು ಕರೆಯಿಸಿ ಬೃಹತ್ ಸಮಾವೇಶ ಮಾಡೋಣ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಪದಾಧಿಕಾರಿಗಳನ್ನಾಗಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಪರ್ವಿನ್ ಬೇಗಂ ದರ್ಜಿಯವರನ್ನು,ಜಿಲ್ಲಾ ಉಪಾಧ್ಯಕ್ಷರನ್ನಾಗಿ ಖಾಸಿಂ ನಡಗೇರಿಯವರನ್ನು, ಸುರಪುರ ತಾಲೂಕು ಅಧ್ಯಕ್ಷರನ್ನಾಗಿ ಚಾಂದಪಾಷಾ ಕುಂಬಾರಪೇಟೆಯವರನ್ನು ಹಾಗು ನಗರ ಘಟಕದ ಅಧ್ಯಕ್ಷರನ್ನಾಗಿ ಶರ್ಮುದ್ದಿನ್ ಖುರೇಶಿಯವರನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಅನೇಕ ಜನ ಮುಖಂಡರು ಹಾಗು ಕಾರ್ಯಕರ್ತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here