ಶ್ರಾವಣ ಮಾಸದ ಅಂಗವಾಗಿ ಶ್ರೀಗಿರಿ ಮಠದಲ್ಲಿ ಶಿವಾನುಭವ ಗೋಷ್ಠಿ

0
7

ಸುರಪುರ: ತಾಲೂಕಿನ ಲಕ್ಷ್ಮೀಪುರ ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಶ್ರೀಗಿರಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಇಷ್ಟಲಿಂಗ ಪೂಜಾ ಹಾಗು ಶಿವಾನುಭವ ಗೋಷ್ಠಿ ಕಾರ್ಯಕ್ರಮವನ್ನು ನಡೆಸಲಾಯಿತು.

ಸೋಮವಾರ ಬೆಳಿಗ್ಗೆ ನಡೆದ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಶ್ರೀಮಠದ ಪೂಜ್ಯರಾದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು ಬೆಳಿಗ್ಗೆ ಗೋಪೂಜೆ ನಡೆಸಿ ನಂತರ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.ನಂತರ ಶರಣ ಸೇವಾ ಸಂಸ್ಥೆಯ ಸಹಯೋಗದಲ್ಲಿ ಶಿವಾನುಭವ ಗೋಷ್ಠಿಯನ್ನು ನಡೆಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ,ಶ್ರಾವಣ ಎನ್ನುವುದು ಪ್ರತಿ ಭಾರತೀಯನಿಗೆ ಪುಣ್ಯ ಪ್ರಾಪ್ತಿಯ ಮಾಸವಾಗಿದೆ,ಈ ಮಾಸದಲ್ಲಿ ದೇಶದಾದ್ಯಂತ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರಗುತ್ತವೆ,ಅಲ್ಲದೆ ಪ್ರತಿ ನಿತ್ಯವುಕೂಡ ವಿಶೇಷ ಅನುಭಾವ ಗೋಷ್ಠಿಗಳು ನಡೆಯುತ್ತವೆ.

ಅದರಂತೆ ಶ್ರೀಮಠದಲ್ಲಿ ಶಿವಾನುಭ ಗೋಷ್ಠಿ ನಡೆಯಲಿದೆ ಅಲ್ಲದೆ ಭಕ್ತಾದಿಗಳು ಭಕ್ತಿಭಾವದಿಂದ ಶ್ರೀಗಿರಿಯ ಮರಡಿ ಮಲ್ಲಿಕಾರ್ಜುನನ ದರ್ಶನವನ್ನು ಪಡೆಯುವ ಜೊತೆಗೆ ಮಠದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಲ್ಲಿಕಾರ್ಜುನನ ಕೃಪೆಗೆ ಪಾತ್ರರಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.ಪ್ರತಿಯೊಬ್ಬ ಭಕ್ತನು ಶ್ರಾವಣ ಮಾಸದಲ್ಲಿ ನಿತ್ಯವು ಇಷ್ಟಲಿಂಗ ಪೂಜೆ ಹಾಗು ದೇವರ ನಾಮ ಸ್ಮರಣೆಯನ್ನು ಮಾಡಬೇಕು.ವರ್ಷವಿಡೀ ತಮ್ಮ ಕೆಲಸದಲ್ಲಿ ತೊಡಗುವ ಮನುಷ್ಯನಿಗೆ ವರ್ಷದಲ್ಲಿ ಒಂದು ದಿನ ದೇವರ ದರ್ಶನ ಜೊತೆಗೆ ಶಿವಾನುಭವ ಚಿಂತನೆಯನ್ನು ನಡೆಸಲೆಂದು ಶ್ರಾವಣ ಮಾಸವಿರುತ್ತದೆ,ಅದನ್ನು ಎಲ್ಲರು ನಿತ್ಯವು ಮನೆಗಳಲ್ಲಿ ಆಚರಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಗೀತ ಗೋಷ್ಠಿಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಪಾಟೀಲ್,ಚಂದ್ರಶೇಖರ ಲಚಮರಡ್ಡಿ,ಭಂಡಾರೆಪ್ಪ ನಾಟೇಕಾರ್,ಅಪ್ಪು ಪಾಟೀಲ್,ಮಲ್ಲು ಪಾಟೀಲ್,ಗಂಗಾಧರ ಶಾಸ್ತ್ರಿ,ಬೂದಯ್ಯ ಸ್ವಾಮಿ,ಬಸಯ್ಯ ಸ್ವಾಮಿ,ಮಲ್ಲನಗೌಡ,ಶಿವರಾಜ ಕಲಕೇರಿ,ಚಂದ್ರಶೇಖರ ಡೊಣೂರ ಹಾಗು ಸಗರ ಅಕ್ಕನ ಭಜನಾ ಮಂಡಳಿಯ ಬಸಮ್ಮ,ಸರಮ್ಮ,ಮಲ್ಲಮ್ಮ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here