ಅವ್ಯವಹಾರ ತನಿಖೆ ನಡೆಸಲು ಆಗ್ರಹಿಸಿ ಅರಕೇರಾ ಗ್ರಾ.ಪಂ ಮುಂದೆ ಪ್ರತಿಭಟನೆ

0
10

ಸುರಪುರ: ಕಳೆದ ಅನೇಕ ವರ್ಷಗಳಿಂದ ಗ್ರಾಮ ಪಂಚಾಯತಿಯಲ್ಲಿ ಭಾರಿ ಅವ್ಯವಹಾರ ನಡೆಸಲಾಗುತ್ತಿದ್ದು ಕೂಡಲೇ ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಮುಖಂಡರು ಅರಕೇರಾ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ಕಳೆದ ಅನೇಕ ವರ್ಷಗಳಿಂದ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದರು.ಅಲ್ಲದೆ ೨೦೧೬-೧೭ ರಿಂದ ೨೦೧೯-೨೦ ರ ವರೆಗೆ ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕು.೧೪ನೇ ಹಣಕಾಸು ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡದೆ ಹಣ ಲೂಟಿ ಮಾಡಲಾಗುತ್ತಿದೆ.

Contact Your\'s Advertisement; 9902492681

ಆದ್ದರಿಂದ ಕೂಡಲೇ ಗ್ರಾಮ ಪಂಚಾಯತಿಲ್ಲಿ ನಡೆದ ಎಲ್ಲಾ ಅವ್ಯವಹಾರ ತನಿಖೆ ನಡೆಸಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯಲ್ಲೂ ನಡೆದ ಅವ್ಯವಹಾರವನ್ನೂ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಮತ್ತು ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿಯನ್ನು ತಾಲೂಕು ಪಂಚಾಯತಿ ವ್ಯವಸ್ಥಾಪಕ ವೆಂಕೋಬ ಬಾಕ್ಲಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ ಮುಖಂಡರಾದ ತಿಪ್ಪಣ್ಣ ಶೆಳ್ಳಗಿ,ಚನ್ನಬಸಪ್ಪ ತಳವಾರ,ಶೇಖರ ಮಂಗಳೂರು,ವೆಂಕಟೇಶ ದೇವಾಪುರ,ಖಾಜಾ ಅಜ್ಮೀರ,ಎಮ್.ಪಟೇಲ್, ಮರಲಿಂಗ ಗುಡಿಮನಿ,ಮಾನಪ್ಪ ಶೆಳ್ಳಗಿ,ರಮೇಶ ಬಾಚಿಮಟ್ಟಿ,ಶರಣಬಸವ ಮಂಗಳೂರು,ಮಹಾದೇವ, ಭೀಮರಾಯ ಮಂಗಳೂರು,ಚಂದ್ರಶೇಖರ ಬಲಶೆಟ್ಟಿಹಾಳ,ಸಾಯಿಬಣ್ಣ ಸದಬ,ಅಂಬ್ರೇಶ ಚಿಂಚೋಳಿ,ಗದ್ದೆಪ್ಪ ನಾರಾಯಣಪುರ,ಮೌನೇಶ ತಿಂಥಣಿ,ಮೈನೊದ್ದೀನ್ ತಿಂಥಣಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here