ಲಂಡನ್‌ನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ: ಪ್ರೊ.ಶ್ರೀರಾಮುಲು ಆಯ್ಕೆ

0
77

ಕಲಬುರಗಿ: ಇದೇಜುಲೈ ೮ ಮತ್ತು ೯ರಂದು ಯುಕೆ (ಕೆಸಿಎಲ್) ಲಂಡನ್‌ನಕಿಂಗ್ಸ್‌ಕಾಲೇಜಿನಲ್ಲಿ ನಡೆಯಲಿರುವ 2019 ನೇ ಸಾಲಿನ ರಾಜಕೀಯ, ಅರ್ಥಶಾಸ್ತ್ರ, ಸಮಾಜ ಮತ್ತುತಂತ್ರಜ್ಞಾನದ (ಎಆರ್‌ಸಿಪಿಇಎಸ್‌ಟಿ)ಅನ್ವಯಿಕ ಸಂಶೋಧನಾಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಲು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಗೂರು ಶ್ರೀರಾಮುಲುರವರನ್ನ ಆಹ್ವಾನಿಸಲಾಗಿದೆ.

Contact Your\'s Advertisement; 9902492681

ಕರ್ನಾಟಕ(ಭಾರತ)ದಲ್ಲಿ ಪರಿಶಿಷ್ಟ ಪಂಗಡದರಾಜಕೀಯ ಭಾಗವಹಿಸುವಿಕೆ ಎಂಬ ವಿಷಯದ ಬಗ್ಗೆಪ್ರಬಂಧ ಮಂಡಿಸಲು ಪ್ರೊ.ಗೂರುಶ್ರೀರಾಮುಲುರವರಿಗೆ ಅಹ್ವಾನ ನೀಡಲಾಗಿದೆ.ಶಿಕ್ಷಣದ ಅನ್ವಹಿಕ ಸಂಶೋಧನಾ ಅಂತರಾಷ್ಟ್ರೀಯ ಸಮ್ಮೇಳನ ಸಂಸ್ಥೆಯ ನೇತೃತ್ವದಲ್ಲಿಕಾರ್ಯಕ್ರಮ ನಡೆಯಲಿದ್ದು, ವಿವಿಧರಾಷ್ಟ್ರದ ಅನೇಕ ಸಂಶೋಧಕರು, ಸಾಹಿತಿಗಳು, ಚಿಂತಕರು ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ.
ಪ್ರಬಂಧ ಮಂಡನೆಯ ಸಲುವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಿಂದಪ್ರೊ.ಗೂರು ಶ್ರೀರಾಮುಲು ವಿದೇಶಿ ಪ್ರವಾಸ ಬೆಳಸಲಿದ್ದು, ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಸೇರಿದಂತೆಅನೇಕರು ಶ್ರೀರಾಮುಲುರವರಿಗೆ ಶುಭಕೋರಿದ್ದಾರೆ.

ಈ ಹಿಂದೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ.ಎಸ್.ಆರ್ ನಿರಂಜನ್, ಅನೇಕ ಬಾರಿ ವಿದೇಶಿ ಸಮ್ಮೇಳನಗಳಲ್ಲಿ ಭಾಗವಹಿಸಿ ವಿವಿಧ ಪ್ರಬಂಧ ಮಂಡನೆ ಮಾಡಿದ್ದರು.ಅದರಂತೆ ಈಗ ಗುವಿಕಗೆ ಮತ್ತೊಂದು ಹೊಸ ಅವಕಾಶ ಒಲಿದು ಬಂದಿರುವದನ್ನ ಸ್ಮರಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here