ಸ್ಲಂ ಜನಾಂದೋಲನ, ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆ ಪ್ರತಿಭಟನೆ

0
62

ಕಲಬುರಗಿ: ಯಾದಗಿರಿ ನಗರದಲ್ಲಿ ಪಿ.ಎಮ್.ಎ.ವಾಯ್ ಯೋಜನೆಯಡಿಯಲ್ಲಿ ಆದ ೨೩೦ ಮನೆಗಳು ಅಂಬೇಡಕರ್ ನಗರದಲ್ಲಿ ಆಗಿದ್ದು ಇದರಲ್ಲಿ ಕೆಲವು ಮನೆಗಳು ಡಿಡಿ ಕಟ್ಟಿ ಸೂಮಾರು ೩ ವರ್ಷ ಕಳೆದರು ಮನೆಗಳು ಸಂಪೂರ್ಣ ಆಗಿರುವುದಿಲ್ಲ, ಮತ್ತು ಪೂರ್ಣಗೊಳದ ಕಾರಣ ಮತ್ತು ಕಳಪೆ ಮಟ್ಟದ ಕಾಮಗಾರಿ ಮಾಡಿದರಿಂದ ಖಂಡಿಸಿ ಸ್ಲಂ ಜನಾಂದೋಲನ ಹಾಗೂ ಕನಾಟಕ ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆ ಯಾದಗಿರ ಘಟಕದಿಂದ ಕರ್ನಾಟಕ ಕೊಳಗೇರಿ ಅಭೀವೃದ್ಧಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಪಿ.ಎಮ್.ಎ.ವಾಯ್ ಯೋಜನೆಯಡಿಯಲ್ಲಿ ಆದ ೨೩೦ ಮನೆಗಳು ಅಂಬೇಡಕರ್ ನಗರದಲ್ಲಿ ಆಗಿದ್ದು ಇದರಲ್ಲಿ ಕೆಲವು ಮನೆಗಳು ಡಿಡಿ ಕಟ್ಟಿ ಸೂಮಾರು ೩ ವರ್ಷ ಕಳೆದರು ಮನೆಗಳು ಸಂಪೂರ್ಣ ಆಗಿರುವುದಿಲ್ಲ, ಮತ್ತು ಗುತ್ತಿಗೇದಾರರು ಕಟ್ಟಿರುವ ಮನೆಗಳು ಕಳಪೆ ಮಟ್ಟದ ಕಾಮಗಾರಿಯಾಗಿದು ಮಳೆಗಾಲದಲ್ಲಿ ಸೋರುತ್ತಿವೆ.

Contact Your\'s Advertisement; 9902492681

ಜನರು ಕಟ್ಟಿಕೊಳ್ಳುವ ಮನೆಗಳಿಗೆ ಇನ್ನು ಹಣ ಮತ್ತು ಸಾಮಾಗ್ರಿಗಳು ಗುತ್ತಿಗೇದಾರರು ನೀಡುತ್ತಿಲ್ಲ ಮತ್ತು ಇನ್ನು ಹೊಸದಾಗಿ ೫ ಸ್ಲಂಗಳಾದ ಇಂದ್ರನಗರ, ಹನುಮಾನ ನಗರ, ಶಿವಪೂರ ಗಲ್ಲಿ, ಕೋಳಿವಾಡ, ಗೋಗಿಮೊಹಲ್ಲಾ ಸ್ಲಂಗಳಲ್ಲಿ ೨೫೦ ಮನೆಗಳಾದ್ದು ಸ್ಲಂನ್ನು ಹೊರತುಪಡಿಸಿ ಬೇರೆ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸುತ್ತಿದ್ದು ಸುಮಾರ ಸಲ ಕರ್ನಾಟಕ ಕೊಳಗೇರಿ ಅಭೀವೃದ್ಧಿ ಮಂಡಳಿ ಅಧಿಕಾರಿಗಳಿಗೆ ಗಮನಕ್ಕೂ ತಂದರು ಸಹ ಸ್ಪಂಧಿಸುತ್ತಿಲ್ಲಾ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಹಣಮಂತ ಶಾಹಪೂರಕರ್, ಸಂಚಾಲಕಿ ಸಂಗೀತಾ ಹಪ್ಪಳ, ಖಜಾಂಚಿ ಆನಂದ ಚಟ್ರಿಕರ್, ಸಂಘಟನಾ ಸಂಚಾಲಕಿ ರೇಣುಕಾ ಎಸ್.ಸರಡಗಿ, ಈರಮ್ಮ ಕೋಳೂರ, ಸಂಗೀತಾ ಅರಕೇರಿ, ಯಂಕಮ್ಮ ಮಾಳಿಕೇರಿ, ನಿರ್ಮಲಾ ಸುಂಗಲಕರ್, ಬಾಬುಮೀಯಾ, ರಾಶಿ ರಾಠೋಡ, ಸುನೀತಾ ಎಮ್.ಕೊಲ್ಲೂರ, ಸಂಗೀತಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here