ಸುರಪುರ: ನಗರದ ಉಪ ಕಾರಾಗೃಹದಲ್ಲಿನ ಖೈದಿಗಳಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮಂಗಳವಾರ ಬೆಳಿಗ್ಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾರಾಗೃಹದಲ್ಲಿನ ಎಲ್ಲಾ ೫೨ ಜನ ಖೈದಿಗಳು ಮತ್ತು ಸಿಬ್ಬಂದಿಗಳ ಆರೋಗ್ಯ ತಪಾಸಣೆಯ ಅಂಗವಾಗಿ ಎಲ್ಲರಿಗೂ ಮಲೇರಿಯಾ,ಹೆಚ್‌ಐವಿ,ಆರ್‌ಬಿಎಸ್ ಹಾಗು ಹೆಚ್‌ಬಿ ಪರೀಕ್ಷೆ ಮಾಡಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ೫ ಜನರಿಗೆ ಕೊರೊನಾ ಲಸಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಡಾ: ಪರಿಮಳ,ಹಣಮಂತ ಅನವಾರ,ಉಮಾಶಂಕರ ದೀಕ್ಷಿತ್,ಸೈಯ್ಯದ್,ಅಶೋಕ,ಶರಣು,ಪರಶುರಾಮ,ಪ್ರತಾಪ ಸೇರಿದಂತೆ ಕಾರಾಗೃಹದ ಎಲ್ಲಾ ಸಿಬ್ಬಂದಿಗಳಿದ್ದರು.