ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ, ಪೃಥ್ವಿ ಹೈದ್ರಾಬಾದ ಕರ್ನಾಟಕ ಶೋಷಿತ ಮಹಿಳೆಯರ ಅಭಿವೃದ್ಧಿ ಸಂಸ್ಥೆ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯಿತು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ ಶಿಬಿರಕ್ಕೆ ಗ್ರಾಪಂ ಅಧ್ಯಕ್ಷ ಸಾತಣ್ಣ ಮಂಟಗಿ ಚಾಲನೆ ನೀಡಿದರು. ನೇತ್ರ ತಜ್ಞ ಡಾ ಗುಲಾಮ ದಸ್ತಗಿರಿ ಅವರು ನೇತ್ರ ತಪಾಸಣೆ ನೆರವೇರಿಸಿದರು. ಈ ಶಿಬಿರದಲ್ಲಿ ಸುಮಾರು 30 ಜನರಿಗೆ ತಪಾಸಣೆ ಮಾಡಿ 5 ಜನರಿಗೆ ಶಸ್ತ್ರ ಚಿಕಿತ್ಸೆ ಕೈಗೊಂಡರು. ವೈದ್ಯಾಧಿಕಾರಿ ಡಾ. ಇರ್ಫಾನ್ ಅಲಿ ಅಧ್ಯಕ್ಷತೆ ವಹಿಸಿದರು.
ಸಂಸ್ಥೆ ಅಧ್ಯಕ್ಷ ಡಾ. ಸಂಜೀವಕುಮಾರ ನಿರ್ಮಲಕರ್ ಅವರು, ಗ್ರಾಮೀಣ ಭಾಗದ ಬಡ ಜನರಿಗೆ ಅನುಕೂಲವಾಗಲು ಇಂಥ ಶಿಬಿರಗಳು ಆಯೋಜಿಸಲಾಗಿದೆ. ಇಂದು ಸರ್ಕಾರದ ಸೌಲಭ್ಯಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಬೇಕಾಗಿದೆ ಎಂದರು.
ನೇತ್ರಾಧಿಕಾರಿ ಡಾ. ವಾಜೀದ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಅಷ್ಠಗಿ, ಸದಸ್ಯ ಭಾಗಪ್ಪ ಸಿಂಗೆ ಉಪಸ್ಥಿತರಿದ್ದರು.