ಸುರಪುರ: ಜ್ಞಾನವು ಅಕ್ಷರ ಕಲಿಕೆ ಮಾತ್ರ ಸೀಮಿತವಾಗದೆ ಅರವತ್ನಾಲ್ಕು ವಿಧವಾದ ವಿದ್ಯೆಗಳನ್ನು ಅರಿತುಕೊಂಡು ಜೀವನವನ್ನು ಸಾಫಲ್ಯಗೊಳಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ರಾಜ್ಯ ರಕ್ಷಣೆಗಾಗಿ ಮಲ್ಲಯುದ್ಧ ಕತ್ತಿವರಸೆಗಧಾಯುದ್ಧ ಬಿಲ್ವಿದ್ಯೆಯನ್ನ ಕಲಿಸಲಾಗುತ್ತಿತ್ತು ಎಂದು ಪೀಠಾಧಿಪತಿಗಳಾದ ಪ್ರಭುಲಿಂಗ ಮಾಹಾಸ್ವಾಮಿಗಳು ತಿಳಿಸಿದರು.
ನಗರದ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ನಡೆದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ,ಅಕ್ಷರ ಕಲಿಕೆಯೊಂದಿಗೆ ಭಗವಂತನ ನಾಮಸ್ಮರಣೆಮಾಡಿ ಆದ್ಯಾತ್ಮದ ಚಿಂತನೆಯಲ್ಲಿ ತೊಡಗಿ ಆತ್ಮಸಾಕ್ಷಾತ್ಕಾರದೊಂದಿಗೆ ಜೀವನ ಸಾಗಿಸಿ ಎಂದರು.
ಇದೇ ಸಂದರ್ಭದಲ್ಲಿ ಅನುಭಾವಿಗಳಾಗಿ ಭಾಗವಹಿಸಿದ್ದ ಕೋನಾಳದ ಪರಮಣ್ಣ ಶರಣರು ನಹಿ ಜ್ಞಾನೇನ ಸದೃಶಂ ಕುರಿತು ಮಾತನಾಡಿ,ಜ್ಞಾನ ಬಹುಮುಖಿಯಾದುದು. ಅದು ಹಲವಾರು ದಿಕ್ಕುಗಳಲ್ಲಿ ಚಲನಶೀಲತೆಯನ್ನು ಪಡೆದು ಕೊಂಡಿರುತ್ತದೆ, ಜ್ಞಾನಕ್ಕೆ ಸಮಾನವಾದುದು ಜಗತ್ತಿನಲ್ಲಿ ಇನ್ನೊಂದಿಲ್ಲ ಜ್ಞಾನದ ಬೊಕ್ಕಸ ತುಂಬಿದಂತೆಲ್ಲ ಇನ್ನೂ ಆಳಕ್ಕೆ ಇಳಿಯುತ್ತಾ ಹೋಗುತ್ತದೆ. ಕುತೂಹಲ ಗರಿ ಕೆದರುವಂತೆ ಮಾಡುತ್ತದೆ ಎಂದರು.
ಗುರುಮೂರ್ತಿಸ್ವಾಮಿ ಹಿರೇಮಠ ಬಸವರಾಜಪ್ಪ. ನಿಷ್ಟಿ ದೇಶಮುಖ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಶರಣಯ್ಯಸ್ವಾಮಿ ಬಳುಂಡಗಿಮಠ ಸಂಗಡಿಗರು ಪ್ರಾರ್ಥನೆಯನ್ನು ದೇವು.ಎಸ್.ಹೆಬ್ಬಾಳ ನಿರೂಪಿಸಿದರು, ಶರಣಬಸಪ್ಪ ಯಾಳವಾರ ಸ್ವಾಗತಿಸಿದರು. ಮಂಗಲಗೀತೆಯನ್ನು ಜ್ಞಾನದೇವ ಪಾಣಿಬಾತೆ ಹಾಡಿದರು.
ಸಂಗೀತ ಕಾರ್ಯಕ್ರಮವನ್ನು ರಾಜಶೇಖರ ಗೆಜ್ಜಿ ಚಂದ್ರಹಾಸ ಮಿಟ್ಟಾ ಪ್ರಾಣೇಶರಾವ್ ಕುಲಕರ್ಣಿ ಸುರೇಶ ಅಂಬುರೆ ರಮೇಶ್ ಕುಲ್ಕರ್ಣಿ ಚನ್ನಪ್ಪ ಗುಂಡಾನೋರ ಗೋಪಾಲ ರಂಗಂಪೇಟ ಮಹಾಂತೇಶ ಶಹಪೂರಕರ ಜಗಧೀಶ ಮಾನು ಶ್ರೇಯಸ್ ಪಾಟೀಲ್ ತಿಮ್ಮಣ್ಣ ಪೋತಲ್ಕರ್ ಗೋಪಾಲ ಕಟ್ಟಿಮನಿ ನಡೆಸಿಕೊಟ್ಟರು.
ಪ್ರಮುಖರಾದ ಸೋಮಶೇಖರ ಶಾಬಾದಿ ಬಸವರಾಜ ಜಮದ್ರಖಾನಿ ಮಹೇಶ ಅಂಗಡಿ ಕೋನಾಳ ಶ್ರೀ ಶೈಲ ನಿಂಬಾಳ ಮಹೇಶ ಹಳ್ಳದ ಹಣಮಂತ್ರಾಯ ಮೇಟಿ ಶಾರದಾ ಅಂಗಡಿ ಕೋನಾಳ ಬೋರಮ್ಮ ಯಾಳವಾರ ನಾಗರತ್ನಾ ನಿಂಬಾಳ ರಾಜಶೇಖರ ಯಾದಗಿರಿ ಪ್ರಕಾಶ ನಿಂಬಾಳ ಮಂಜುನಾಥ ಗಚ್ಚಿನಮನಿ ರಾಮಣ್ಣ ಚಾರು ಇತರರು ಇದ್ದರು.