ಪೇಠ ಅಮ್ಮಾಪುರ ಮನೆ ಕಳ್ಳತನ:ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಭೇಟಿ

0
9

ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಮನೆ ಕಳ್ಳತನ ಪ್ರಕರಣ ನಡೆದಿದೆ.ಗ್ರಾಮದ ಬೈಲಪ್ಪ ಹದ್ದಗಲ್ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದ್ದು,ಘಟನೆಯ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ: ಸಿ.ಬಿ ವೇದಮೂರ್ತಿಯವರು ಹೇಳಿಕೆ ನೀಡಿ,ಬೈಲಪ್ಪ ಕುಟುಂಬಸ್ಥರು ರಾತ್ರಿ ಮನೆಯ ಬಾಗಿಲು ಹಾಕದೆ ಮಲಗಿದ್ದರಿಂದಾಗಿ ಇದನ್ನು ಗಮನಿಸಿದ ಕಳ್ಳರು ಮನೆಯಲ್ಲಿದ್ದ ಸೂಟಕೆಸ್ ಕಳ್ಳತನ ಮಾಡಿ ಅದರಲ್ಲಿದ್ದ ೩೫ ಗ್ರಾಂ ಬಂಗಾರ ತೆಗೆದುಕೊಂಡು ಉಳಿದ ವಸ್ತುಗಳನ್ನು ಊರ ಆಚೆಗೆ ಎಸೆದು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ತಮ್ಮ ಮನೆಯ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡು ಮನೆಯಲ್ಲಿನ ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದ್ದಾರೆ.ಅಲ್ಲದೆ ಯಾದಗಿರಿ ಜಿಲ್ಲಾ ಪೊಲೀಸ್ ವತಿಯಿಂದ ಜಾರಿಮಾಡಲಾದ ಗೃಹ ಸುರಕ್ಷಾ ಯಾಪ್‌ನ್ನು ಸಾರ್ವಜನಿಕರು ಬಳಸಲು ಸಲಹೆ ನೀಡಿದ್ದಾರೆ.

Contact Your\'s Advertisement; 9902492681

ಸ್ಥಳಕ್ಕೆ ಡಿವೈಎಸ್ಪಿ ಭೇಟಿ: ಕಳ್ಳತನ ನಡೆದ ಕುರಿತು ಪ್ರಕರಣ ದಾಖಲಾದ ನಂತರ ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಹಾಗು ಸುರಪುರ ಠಾಣೆ ಪಿಐ ಸುನಿಲಕುಮಾರ ಮೂಲಿಮನಿ ಹಾಗು ಕ್ರೈಂ ಪಿಎಸ್‌ಐ ಕೃಷ್ಣಾ ಸುಬೇದಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಲ್ಲದೆ ಈ ಕುರಿತು ಡಿವೈಎಸ್ಪಿ ವೆಂಕಟೇಶ ಉಗಿಬಂಡಿಯವರು ವಿವರಣೆ ನೀಡಿ,ಕಳ್ಳತನ ಮಾಡಿರುವವರುನ್ನು ಶೀಘ್ರದಲ್ಲಿಯೆ ಪತ್ತೆ ಹಚ್ಚಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here