ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಎಸ್ಎಫ್ಐ ಪ್ರತಿಭಟನೆ

0
14

ರಾಯಚೂರು : ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕ್ರೂರ ಘಟನೆ ಖಂಡಿಸಿ ಹಾಗೂ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡಲು ಆಗ್ರಹಿಸಿ ಎಸ್ಎಫ್ಐ ರಾಯಚೂರು ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ತಹಶಿಲ್ದಾರರ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆ ನಡೆಸಿ ಘೋಷಣೆ ಕೂಗಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದರು.

ರಾಜ್ಯದಲ್ಲಿ ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಹಲ್ಲೆ, ಕೊಲೆ, ಅನುಮಾನಸ್ಪದ ಸಾವುಗಳು ಹೆಚ್ಚುತ್ತಲೇ ಇವೆ. ರಕ್ಷಿತಾ, ದಾನಮ್ಮ, ಕಾವ್ಯ, ಕವಿತಾ, ರೇಣುಕಾ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಇತ್ತೀಚಿನ ವರ್ಷಗಳಲ್ಲಿ ಸಾಮೂಹಿಕ ಅತ್ಯಾಚಾರ, ಅನುಮಾನಸ್ಪದ ಸಾವು, ಕೊಲೆ ಇತ್ಯಾದಿಗೆ ಬಲಿ ಪಶುಗಳಾಗಿದ್ದಾರೆ.

Contact Your\'s Advertisement; 9902492681

ಇಷ್ಟಾದರೂ ಈ ಅಪರಾಧ ಪ್ರಕರಣ ಸಂಖ್ಯೆ ನಿಲ್ಲುತ್ತಿಲ್ಲ. ದಿನೇ ದಿನೇ ಹೆಚ್ಚುತ್ತಲೇ ಇದೆ. ಇವುಗಳನ್ನು ತಡೆಯುವಲ್ಲಿ ರಾಜ್ಯದ ಪೋಲಿಸ್ ಇಲಾಖೆ, ಸರ್ಕಾರ ಮತ್ತು ಸಂಬಧಿಸಿದ ಆಯೋಗಗಳು ವಿಫಲವಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ವನ್ನು ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಮಾತನಾಡಿ ಮೊನ್ನೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಜೀವಂತ ಸಾಕ್ಷಿಯಾಗಿದೆ ಅಲ್ಲದೆ ಮೈಸೂರಿನ ಚಾಮುಂಡಿ ಬೆಟ್ಟ ಪ್ರದೇಶವು ಪ್ರವಾಸಿ ತಾಣಗಳ ಪ್ರದೇಶವಾಗಿದ್ದು, ವಿಶ್ವ ಖ್ಯಾತಿ ಪಡೆದ ಅರಮನೆ ನಗರ ಹೊಂದಿದ ಹಾಗೂ ಅನೇಕ ರಮಣಿಯ ಸ್ಥಳಗಳನ್ನು ಹೊಂದಿರುವ ಪ್ರದೇಶವಾಗಿದೆ ಹೀಗಾಗಿ ಈ ಪ್ರದೇಶಕ್ಕೆ ವಿವಿಧ ರಾಜ್ಯಗಳಿಂದ, ಜಿಲ್ಲೆಗಳಿಂದ ಪ್ರವಾಸಿಗರು ವಿದ್ಯಾರ್ಥಿಗಳು ಬರುತ್ತಿರುತ್ತಾರೆ ಅವರೆಲ್ಲರಿಗೂ ಸುರಕ್ಷತೆಯನ್ನು ಕೊಡಬೇಕಾಗಿದ್ದು ಸರ್ಕಾರದ ಮೊದಲ ಆದ್ಯತೆ ಈ ತರಹ ಬಹುತೇಕ ಪ್ರಕರಣಗಳಲ್ಲಿ ವಿದ್ಯಾರ್ಥಿನಿಯರ ಪ್ರಕರಣಗಳೇ ಜೀವಂತ ಸಾಕ್ಷಿಯಾಗಿವೆ.

ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಹಾಗೂ ನಿಷ್ಪಕ್ಷಪಾತ, ಪಾರದರ್ಶಕ, ರಾಜಕೀಯ ಒತ್ತಡ ರಹಿತವಾದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಭದ್ರತೆ ಅಗತ್ಯ ನೆರವು ನೀಡಬೇಕು ಹಾಗೂ ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಮತ್ತು ರಾಜ್ಯದಲ್ಲಿ ಉಗ್ರಪ್ಪ ಸಮಿತಿಯು ನೀಡಿದ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೆ ಮಾಡಲು ಮುಂದಾಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಒತ್ತಾಯಿಸುತ್ತಿದೆ ಎಂದು ಹೇಳಿದರು.

ರಾಜ್ಯದ ಗೃಹಮಂತ್ರಿ ಸ್ಥಾನ ಹೊಂದಿರುವ ಮಾನ್ಯ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಒಂದು ಉನ್ನತ ಹುದ್ದೆಯಲ್ಲಿದ್ದು ಅವರ ನೀಡಿದ ಹೇಳಿಕೆ ರಾಜ್ಯ ಸರ್ಕಾರ ತಲೆತಗ್ಗಿಸುವಂತಹ ಹೇಳಿಕೆ ಅಷ್ಟೇ ಅಲ್ಲ ಅವರು ಬೆಳೆದು ಬಂದ ಸಂಘವು ಮಹಿಳೆಯರ ಬಗ್ಗೆ ಹೊಂದಿರುವ ನಿಲುವನ್ನು ಪ್ರತಿಪಾದಿಸುತ್ತಿದ್ದಾರೆ, ಗೃಹ ಸಚಿವರೇ ವಿದ್ಯಾರ್ಥಿನಿಯರ ಬಗ್ಗೆ, ಮಹಿಳೆಯರ ಬಗ್ಗೆ ಈ ರೀತಿಯ ನಿಲುವು ಹೊಂದಿದ್ದರೆ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತದೆ.

ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಮತ್ತು ತಕ್ಷಣ ನಿಪಕ್ಷಪಾತ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪ್ರತಿಭಟನಾ ಮನವಿಯ ಮೂಲಕ ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ದೀನಸಮುದ್ರ ಮುಖಂಡರಾದ ಕುಪ್ಪಣ್ಣ ಸೇರಿದಂತೆ ಅನೇಕ ವಿದ್ಯಾರ್ಥಿನಿಯರಾದ ಶೃತಿ, ಮೇಘಾ, ಗಂಗಾ, ಸ್ವಾತಿ, ಬಸ್ಸಮ್ಮ, ಸುಲ್ತಾನ್ ಬೇಗಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here