ಕಲಬುರಗಿ: ರಾಷ್ಟ್ರೀಯಆಹಾರ ಭದ್ರತಾಯೋಜನೆಯಡಿಬಿಜಿಎಸ್-೯ ಹೆಸರು ತಳಿಯ ಕ್ಷೇತ್ರೋತ್ಸವ ನಡೆಯಿತು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ರಾಜು ಜಿ. ತೆಗ್ಗಳ್ಳಿ ಮಾತನಾಡಿ ಬೀಜದಿಂದ ಬೀಜದವರೆಗಿನ ಕೃಷಿ ತಂತ್ರಜ್ಞಾನಗಳನ್ನು ರೈತರು ವೈಜ್ಞಾನಿಕವಾಗಿ ಅನುಸರಿಸುವುದರಿಂದ ಅಲ್ಪ-ಸ್ವಲ್ಪ ಮಳೆಗೂ ಬೆಳೆಯ ತಳಿಯು ಉತ್ತಮ ಇಳುವರಿ ನೀಡಿದ್ದು, ಬೀಜ ಶೇಖರಣೆಗೆ ಶಿಫಾರಸ್ಸಿನ ಕೊಯ್ಲು ಮತ್ತು ಶೇಖರಣಾ ತಂತ್ರಜ್ಞಾನ ಅಳವಡಿಸುವಂತೆ ರೈತರಿಗೆ ಸಲಹೆ ನೀಡಿದರು.
ಪಲ್ಸ್ ಮ್ಯಾಜಿಕ್ ಸಿಂಪರಣೆಯಿಂದ ಹೂ, ಕಾಯಿ ಎಲೆಗಳ ರಚನೆಉತ್ತಮಗೊಂಡಿದೆ.ಸಸ್ಯರೋಗತಜ್ಞರಾದಜಹೀರಅಹಮದ್ ಮಾತನಾಡಿ ಎಲೆಚುಕ್ಕೆ, ಬೂದಿ ರೋಗದಿಂದ ಪ್ರಸ್ತುತ ಈ ತಳಿಯು ಪಾರಾಗಲುರೈತರುಜೂನ್‌ಆರಂಭದಲ್ಲಿ ಸಕಾಲಕ್ಕೆ ಬಿತ್ತನೆಯೇಕಾರಣವಾಗಿದೆ. ಹಳದಿ ಅಂಟು ಮೋಹಕ ಬಲೆ ಎಕೆರೆಗೆ ೮-೧೦ ಅಳವಡಿಸುವುದರಿಂದ ನಂಜಾಣುತರುವ ಕೀಟಗಳ ನಿಯಂತ್ರಣವಾಗುತ್ತದೆ ಎಂದರು.
ಸೈದಪ್ಪ ನಾಟೀಕರ್ ಸ್ವಾಗತಿಸಿದರು.ನಿರಂಜನಧನ್ನಿ ವಂದಿಸಿದರು.ರೈತರುಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.