ದಕ್ಷಿಣ ಕೊರಿಯಾದಲ್ಲಿ ಸೆ.1 ರಿಂದ ರೆಹಮಾನ್ ಪಟೇಲ್ ಅವರ ಕಲಾಕೃತಿ ಪ್ರದರ್ಶನ

0
72

ಕಲಬುರಗಿ: ಮೂಲದ ಚಿತ್ರಕಲಾವಿದ ರೆಹಮಾನ್ ಪಟೇಲ್ ಅವರ ವರ್ಣಚಿತ್ರವನ್ನು ೭ನೇ ಗೊಜೆ ಅಂತರಾಷ್ಟ್ರೀಯ ಕಲಾ ಉತ್ಸವದಲ್ಲಿ ಪ್ರದರ್ಶಿಸಲಾಗುವುದು, ಇದು ದಕ್ಷಿಣ ಕೊರಿಯಾದ ಹೇಗೆಮ್‌ಗ್ಯಾಂಗ್ ಥೀಮ್ ಮೂಸಿಯಂನ ೨ನೇ ಮಹಡಿಯಲ್ಲಿರುವ ಯುಕ್ಯಂಗ್ ಮೂಸಿಯಂ ಆಫ್ ಆರ್ಟ್‌ನಲ್ಲಿ ಸೆಪ್ಟೆಂಬರ್ ೦೧ ರಿಂದ ಅಕ್ಟೋಬರ್ ೨೫, ೨೦೨೧ ರವರೆಗೆ ನಡೆಯಲ್ಲಿದೆ.

೬೩ ದೇಶಗಳ ೨೮೨ ಸಮಕಾಲೀನ ಕಲಾವಿದರಲ್ಲಿ ರೆಹಮಾನ್ ಪಟೇಲ್ ಒಬ್ಬರು,  ಅವರ ಕಲಾಕೃತಿಯನ್ನು ಈ ಎರಡು ತಿಂಗಳ ಅಂತರಾಷ್ಟ್ರೀಯ ಕಲಾ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ. ಈ ಪ್ರದರ್ಶನದ ವಿಷಯ ’ ಮತ್ತೆ ಶಾಂತಿ’ (ಪೀಸ್ ಅಗೇನ್). ಆಯೋಜಕರ ಪ್ರಕಾರ ಈ ಕಲಾ ಉತ್ಸವವು ಅಂತರಾಷ್ಟ್ರೀಯ ಕಲಾವಿನಿಮಯ ಮತ್ತ್ತು ಸಾಮರಸ್ಯಕ್ಕೆ ವೇದಿಕ್ಕೆಯಾಗಿದು ಪ್ರಪಂಚದಾದ್ಯಂತಹ ಕೃತಿಗಳನ್ನು ಕಲಾವಿದರ ಕೃತಿಗಳನು ಪೀಸ್ ಅಗೇನ್ ಬ್ಯಾನರ್ ಅಡಿಯಲ್ಲಿ ಪ್ರದರ್ಶಿಸುತ್ತದೆ ಮತ್ತು ವಿವಿಧ ಸಂಸ್ಕೃತೀಯ ಹಿನ್ನೆಲೆಗಳ ಕಲಾವಿದರನ್ನು ಅನ್ವೇಷಿಸಲು ಮತ್ತು ಸಂವಾದಿಸಲು ವೇದಿಕೆಯಾಗಿದೆ. ಗುಣ ಮಟ್ಟದ ಕಲಾಕೃತಿಗಳ ಮೂಲಕ ಸಾರ್ವಜನಿಕರೊಂದಿಗೆ ಸಂವಹನ ನಡೆಸುವ ಅಮೂಲ್ಯವಾದ ಅನುಭವವಾಗಿದೆ.

Contact Your\'s Advertisement; 9902492681

ಚಿತ್ರ ಕಲಾಕೃತಿಯ ಬಗ್ಗೆ: ರೆಹಮಾನ್ ಪಟೇಲ್ ಅವರು ವರ್ಣ ಚಿತ್ರಗಳಲ್ಲಿ ’ಕೊಡು ಮತ್ತೆ ತೆಗೆದುಕೊಳ್ಳಿ’ ಎಂಬ ಶೀಷಿಕ್ಕೆಯಲ್ಲಿ ಮುಖ್ಯವಾಗಿ ಬಿಳ್ಳಿ ಮತ್ತು ನೀಲಿ ಬಣ್ಣಗಳನ್ನು ಬಳಸಲಾಗಿದೆ ಅಂದು ಶಾಂತಿ ಮತ್ತು ಸಾಮರಸ್ಯವನ್ನು ಪ್ರತಿನಿಧಿಸುತ್ತೆ ಏಕತೆಯ ಭಂಗ ಮತ್ತು ವಿಭಜನೆಯನ್ನು ಸೂಚಿಸಲು ಅವರ ಕೆಂಪು ಬಣ್ಣವನ್ನು ಬಳಸಿದಾರೆ. ಸಂಯೋಜನೆಯು ಮಾನವ ಉತ್ತಮ ಎಂದು ವಿವರಿಸುತದೆ ಮತ್ತು ದೇವರು ನೀಡಿದ ಈ ಅದ್ಭುತ ಭೂಮಿಯಲ್ಲಿ ಶಾಂತಿಯುತವಾಗಿ ಬದುಕಿ. ಈ ಕಲಾಕೃತಿ ದಕ್ಷಿಣ ಕೊರಿಯಾದ ಹೇಗೆಮ್‌ಗ್ಯಾಂಗ್ ಥೀಮ್ ಮೂಸಿಯಂನ ಸಂಗ್ರಾಹಲಯಕ್ಕೆ ದಾನವಾಗಿರುವದರಿಂದ ಶಾಶ್ವತ ಸ್ಥಳವನ್ನು ಅಳವಡಿಸಿಕೋಳುತ್ತದೆ. ಈ ನಿಟ್ಟಿನಲ್ಲಿ ಈಗಾಗಲೆ ಸಂಗ್ರಾಲಯದಿಂದ ದಾನ ಪತ್ರ ವನ್ನು ಪಟೇಲರಿಗೆ ನೀಡಲಾಗಿದೆ.

’ಭಾರತದ ಪ್ರಜೆಯಾಗಿರುವ’ ಕಲಾವಿದ ರೆಹಮಾನ್ ಪಟೇಲ್ ಅವರು ಶಾಂತಿ ಮತ್ತು ಸಾಮರಸ್ಯವನ್ನು ಬೋಧಿಸುವ  ಮಹಾತ್ಮ ಗಾಂಧಿಯನ್ನು ಪ್ರತಿನಿಧಿಸುತ್ತಾರೆ. ಶಾಂತಿಯುತ ಒಪ್ಪಂದ ವನ್ನು ಸಾಧಿಸುವುದು ಅಷ್ಟೂ ಸುಲಭವಲ್ಲ. ಜಾಗತಿಕ ಶಾಂತಿಯು ನೈಸರ್ಗಿಕ ಮತ್ತು ಮಾನವ ನಿಮಿತ ಕಾರಣಗಳನ್ನು ಒಳಗೊಂಡಿರುವ ಅನೇಕ ಸವಾಲುಗಳಿಂದ ಅಡ್ಡಿಯಾಗಿದೆ. ಶಾಂತಿಯನ್ನು ಸಾಧಿಸುವುದರ ಹಿಂದಿನ ತರ್ಕಿಕತೆಯು ’ಕೊಡು ಮತ್ತು ತೆಗೆದುಕೊಳ್ಳುವಿಕೆ”  ಮಾನವಿಯತೆ,  ಕ್ಷೆಮ ಮತ್ತು ಅಹಿಂಸೆಯ ಸಕಾರಾತ್ಮಕ ತಿಳುವಳಿಕ್ಕೆಯಲ್ಲಿದೆ. ಸರಿಯಾದ ತಿಳುವಳಿಕೆ ಜಗತ್ತನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತದೆ. ಈ ಸಂದೇಶವನ್ನು ಪಟೇಲ್ ಅವರ ವರ್ಣಚಿತ್ರದೊಂದಿಗೆ ಪ್ರದರ್ಶಿಸಿಸಲಾಗುತ್ತದೆ.

ಇಂತಹ ಪ್ರದರ್ಶನವನ್ನು ಆಯೋಜಿಸುವುದರಿಂದ ಜನರಿಗೆ ಕೆಟ್ಟ ವಿಷಯಗಳಿಂದ ದೂರವಿರಲು ಅನುಕೂಲವಾಗುತ್ತದೆ. ಮತ್ತು ವಿಶ್ವಶಾಂತಿಗಾಗಿ ಜಾಗೃತಿ ತರಲು ಇದು ಈಗ ಅತ್ಯಂತ ಅಗತ್ಯವಾಗಿದೆ. ಪಟೇಲ್ ಅವರು ಯಾವಾಗಲೂ ಪ್ರಸ್ತುತ ಸಮಸ್ಯಗಳ ಮೇಲೆ ಕೆಲಸ ಮಾಡುತ್ತಾರೆ. ಅವರ ಸೃಜನಶೀಲ ಕಲಾಕೃತಿಗಳು ಮತ್ತು ಸಂಶೋಧನೆಗಾಗಿ ಅವರು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ ಹಾಗೂ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯಿಂದ ಫೆಲೋಶಿಪ್ ಪಡೆದಿದ್ದಾರೆ. ಅವರು ಭೂತಾನ್, ಬಾಂಗ್ಲಾದೇಶ, ಮತ್ತು ಶ್ರೀಲಂಕಾಕ್ಕೆ ಭೇಟಿ ನೀಡಿ ಅವರ ಕಲೆಯ ಮೂಲಕ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here