ಶಿಕ್ಷಣ ನಶಿಸಿ ಹೋಗದ ಸಂಪತ್ತು: ಶಿವಕಾಂತ ಚಿಮ್ಮಾ

0
39

ಕಲಬುರಗಿ: ನಗರದ ಕನ್ನಡ ಭವನದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ 2020-21ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.‌ಸಿ‌ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಹೆಳವ ಸಮುದಾಯದ ಹೆಸರು ಉತ್ತುಂಗಕ್ಕೇರಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಣೋತಿ ಗುರಲಿಂಗಪ್ಪ (93.83% ಪಿ.ಯು.ಸಿ), ಜ್ಯೋತಿ ಸಾಯಬಣ್ಣ (81% ಪಿ.ಯು.ಸಿ), ಭೀಮಣ್ಣ ಸಾಯಬಣ್ಣ (80% ಪಿ.ಯು.ಸಿ), ರಾಹುಲ್ ಸಂಜೀವಕುಮಾರ (91.96%),  ಅನಿತಾ ಮಲ್ಲೇಶ (90.72%), ಸಿದ್ದಾರ್ಥ ಶ್ರವಣಕುಮಾರ (90%), ಶಿವಕುಮಾರ ಸಿದ್ದಪ್ಪ (90%), ವೈಶ್ಣವಿ ಪ್ರಭು ಯಾಳಗಿ (87.04%), ಧನರಾಜ ನಾಗೇಂದ್ರ (86.24%), ವಿಕಾಸ ಲಕ್ಷ್ಮಣ (85.76%), ಆಕಾಶ ಗಂಗಾಧರ (84.16%), ಸುನೀಲ್ ಲಾಲಪ್ಪ (83.68%), ಆಕಾಶ ಗುಂಡಪ್ಪ (83.36%), ಅಜಯಕುಮಾರ ಶಂಕರ (83.04%), ಪೂಜಾ ಲಾಲಪ್ಪ (80%), ಕಾರ್ತಿಕ ಸುರೇಶ (79.04%), ದೇವರಾಜ ದಶರತ (77.75%)  ಅವರಿಗೆ ಮುಖ್ಯ ಅತಿಥಿಗಳಾದ ಜ್ಞಾನ ಇನಸ್ಟಿಟ್ಯೂಟ್ ಆಫ್ ಲರ್ನಿಂಗ್ ನ ಸಂಸ್ಥಾಪಕ ಅಧ್ಯಕ್ಷರಾದ ಸಂಗಮೇಶ ಸರಡಗಿ ಹಾಗೂ ಕಲಬುರಗಿ ಜಿಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರಭದ್ರ ಸಿಂಪಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ ಹೆಳವ ಸಮಾಜದ ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ ಸಮುದಾಯದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮನೆಯೇ ಮೋದಲ ಪಾಠ ಶಾಲೆ, ತಾಯಿಯೇ ಮೋದಲ ಗುರು ಎನ್ನುವಂತೆ ‌ಮಕ್ಕಳು ಸದಾ ಹೆತ್ತವರನ್ನು ಪೂಜಿಸಬೇಕು. ಕಲಿತ ಶಾಲೆ‌, ಶಿಕ್ಷಣ ನೀಡಿದ ಗುರುವೃಂದಕ್ಕೆ ಎಂದು‌ ಮರೆಯಬಾರದು. ವಿದ್ಯಾರ್ಥಿ ಜೀವನದಲ್ಲಿ ಸಂಪಾದಿಸಿದ ಜ್ಞಾನ ಸಮಾಜದ ಒಳಿತಿಗಾಗಿ ಬಳಕೆಯಾಗಬೇಕು. ಸಮುದಾಯದ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

Contact Your\'s Advertisement; 9902492681

ಕಾರ್ಯಕ್ರಮವನ್ನು ಉದ್ದೇಶಿಸಿ ಶಿವಕಾಂತ ಚಿಮ್ಮಾ ಮಾತನಾಡುತ್ತಾ ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.

ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಆರ್. ಹೆಳವರ ಹೆಬ್ಬಾಳ ನಿರೂಪಿಸಿದರು.ವಿದ್ಯಾರ್ಥಿನಿ ಪೂಜಾ ಪ್ರಾರ್ಥಿಸಿದಳು. ಅಶೋಕ ದೇಗಲಮಡಿ ಸ್ವಾಗತಿಸಿದರು. ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಮಾರುತಿ ಹೆಳವರ, ತಿಪ್ಪಣ್ಣ ಹೆಳವರ ರಾಂಪೂರಹಳ್ಳಿ, ಅಂಕಿತಾ ಹೆಳವರ, ಪ್ರಭು ಎಸ್. ಯಾಳಗಿ, ಗುರಲಿಂಗ ಹೆಳವರ, ಗಂಗಾದರ ಹೆಳವರ, ಲಕ್ಷ್ಮಣ ಹೆಳವರ, ಶಿವಾನಂದ ಬೈರಾಮಡಗಿ, ರಾಜು ಹೆಳವರ, ನಾಗಪ್ಪ ಹೆಳವರ, ಅಶೋಕ ಮದುರಾ (ಬಿ), ದೇವಪ್ಪ ಚಿಗರಹಳ್ಳಿ, ಹಣಮಂತ ಲಕ್ಷ್ಮಣ, ಪುಂಡಲೀಕ, ರಮೇಶ ಮಾಣಿಕರಾವ ಮತ್ತು ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here