ಕಲಬುರಗಿ: ಆತ್ಮಸ್ಥೈರ್ಯ ಮತ್ತು ಧೈರ್ಯ ವಿದ್ಯಾರ್ಥಿಗಳ ಶಸ್ತ್ರವಾಗಿರಬೇಕು ಅಂದಾಗ ಕೋರೊನಾ ವನ್ನು ನಮ್ಮ ದೇಶದಿಂದ ಸಂಪೂರ್ಣವಾಗಿ ಓಡಿಸಬಹುದು
ನಾಲ್ಕುಚಕ್ರ ತಂಡ ದಿನಾಲೂ ಒಂದಿಲ್ಲೊಂದು ವಿನೂತನ ರೀತಿ ಕಾರ್ಯಕ್ರಮ ಮಾಡುವ ಮೂಲಕ ಸಮಾಜದಲ್ಲಿ ನಿರ್ಗತಿಕರು ಅಶಕ್ತರಿಗೆ ಸಹಾಯ ಮಾಡುತ್ತ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನ್ಯಾಯ ಕೊಡಿಸುವ ಇವರ ಹೋರಾಟ ಶ್ಲಾಘನಿಯ ಎಂದು ಅಪ್ಪಾಜೀ ಗುರುಕುಲ ಶಾಲೆ ಸಂಸ್ಥೆಯ ಮುಖ್ಯಸ್ಥರಾದ ರಾಜು ಅಪ್ಪಾಜೀ ಉದನೂರ್ ಹೇಳಿದರು.
ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ “ಸ್ವಾಗತ ಸಪ್ತಾಹ ಕಾರ್ಯಕ್ರಮ” ಅಂಗವಾಗಿ
ಶಾಲೆಗಳು ಪುನರಾರಂಭಗೊಂಡ ಹಿನ್ನೆಲೆ ಮಕ್ಕಳಿಗೆ ಉತ್ಕೃಷ್ಟ ಮಟ್ಟದ ಚಾಕೊಲೇಟ್ ಮತ್ತು ಪೌಷ್ಟಿಕಾಂಶ ನೀಡುವ ಫ್ರೂಟ್ ಜ್ಯೂಸ್ ವಿತರಣೆ ಮಾಡಿ ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ಮುಖ್ಯಸ್ಥರಾದಾ ಮಾಲಾ ದಣ್ಣೂರ್ ಮತ್ತು ಮಾಲಾ ಕಣ್ಣಿ ಸತತ ಒಂದು ವಾರದಿಂದ ಮಾಡುತ್ತ ಬರುತ್ತಿರುವ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕೋರೊನಾ ವಿರುದ್ಧ ಪ್ರತಿಯೊಬ್ಬರು ಆತ್ಮಸ್ಥೈರ್ಯದಿಂದ ಹೋರಾಡಬೇಕು ವೈರಸ್ ಗೆ ಹೆದರಿ ಮನೆಯಲ್ಲಿ ಕೂಡುವುದು ಬೇಡ ನಮ್ಮ ದೇಶದಿಂದ ಅಂತಹ ಬ್ರೀಟಿಷರನ್ನು ಓಡಿಸಿ ನಮ್ಮ ದೇಶವನ್ನು ಉಳಿಸಿಕೊಂಡಿದ್ದೆವೆ ಇನ್ನೂ ಇ ವೈರಸ್ ಯಾವ ಲೆಕ್ಕ ಎಂದು ಕೇಳುವ ಮೂಲಕ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸಿದರು.
ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಮತ್ತು ವಿದ್ಯಾರ್ಥಿಗಳು ಸರ್ಕಾರದ ಆದೇಶ ಪಾಲಿಸಿ ತಪ್ಪದೇ ಮಾಸ್ಕ ಸ್ಯಾನಿಟೈಸರ್ ಬಳಸಬೇಕು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಮತ್ತು ಜಿಲ್ಲೆಯಲ್ಲಿ ಕೋರೊನಾ ಜಾಗೃತಿ ನಿಮ್ಮಂತಹ ವಿದ್ಯಾರ್ಥಿಗಳಿಂದ ಪ್ರತಿ ಭಾನುವಾರ ಮಾಡುವ ಮೂಲಕ ಜನರಲ್ಲಿನ ಆತಂಕ ದೂರ ಮಾಡಬೇಕು ಸ್ವಚ್ಛತೆ ಆದ್ಯತೆ ನೀಡಿ ಪರಿಸರ ಕಾಪಾಡುವಂತ ಕಾರ್ಯಕ್ರಮಗಳನ್ನು ಶಾಲಾ ಮಟ್ಟದಲ್ಲಿ ಮಾಡಬೇಕು ಹುಟ್ಟುಹಬ್ಬದ ಆಚರಣೆಗೆಂದು ದುಂದು ವೆಚ್ಚ ಮಾಡದೇ ಇನ್ನೊಬ್ಬರಿಗೆ ಸಹಾಯ ಮಾಡಲು ಆ ದುಡ್ಡನ್ನು ಉಪಯೋಗಿಸಿ ಈಗಿನಿಂದಲೆ ಸಮಾಜದ ಬಗ್ಗೆಗಿನ ಕಾಳಜಿ ರೂಢಿಸಿಕೊಳ್ಳಬೇಕು ಯುವ ಸಮೂಹ ಕೋವಿಡ್ ವಿರುದ್ಧ ಹೋರಾಡಿ ಅದನ್ನು ದೇಶದಿಂದ ನಿರ್ನಾಮ ಮಾಡಿ ಗೆದ್ದರೆ ಸಾಧನೆ ಮಾಡಿದಂತೆ ಎಂದು ಹೇಳಿದರು.
ಅದೇ ರೀತಿ ಸೋಮುವಾರ ಶುರುವಾದ ಈ ಕಾರ್ಯಕ್ರಮವು ಇಲ್ಲಿಯವರೆಗೆ ಚೇತನ ಶಾಲೆ ಸೂಪರ್ ಮಾರ್ಕೆಟ್, ನಗರೇಶ್ವರ ಶಾಲೆ ಗಂಜ್, ವೀರತಪಸ್ವಿ ಶಾಲೆ ಬಿದ್ದಪುರ್ ಕಾಲೋನಿ, ಸ್ಲಂ ಕಲಿಕಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಮುಂಬರುವ ದಿನಗಳಲ್ಲಿ ಹಳ್ಳಿಗಳಲ್ಲಿರುವ ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಮಾಲಾ ದಣ್ಣೂರ್ ಮಾಲಾ ಕಣ್ಣಿ, ಕಲ್ಯಾಣರಾವ್ ಪಾಟೀಲ್ ಕಣ್ಣಿ, ಮಹೇಶ್ಚಂದ್ರ ಪಾಟೀಲ್ ಕಣ್ಣಿ ಸದಸ್ಯರಾದ ಪ್ರಸಾದ್ ಜೋಶಿ, ನಾಗರಾಜ್ ಹೆಂಬಾಡಿ ವೈಶಾಲಿ ನಾಟಿಕಾರ್, ವಿಜಯಲಕ್ಷ್ಮಿ ಹೀರೆಮಠ್, ಜ್ಯೋತಿ ಪಾಟೀಲ್ ಶಾಲೆಯ ಶಿಕ್ಷಕರಾದ ಗುರು ಸಾಲಿಮಠ್, ಪಾಲಾಕ್ಷಯ್ಯ ಸ್ವಾಮಿ ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.