ಕಲಬುರಗಿ : ದೇಶ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡಿರುವ ಯೋಧರ ಕೊಡುಗೆ ಅಮೂಲ್ಯವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಫಲದಿಂದ ಇಂದು ನಾವೆಲ್ಲ ಸ್ವತಂತ್ರವಾಗಿ ಸಂತೋಷವಾಗಿದ್ದೇವೆ. ಅವರ ಶಿವಜೀವನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಆಗಬೇಕೆಂದರು. ಸ್ವಾತಂತ್ರ್ಯ ಪಡೆಯಲು ಶರಣಬಸವೇಶ್ವರ ಸಂಸ್ಥಾನ ಕೊಡುಗೆ ಅಪಾರವಾಗಿದೆ. ಸಂಸ್ಥಾನ ಮೊದಲಿನಿಂದಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯ ನೀಡುತ್ತಾ ಬಂದಿದೆ. ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಅನೇಕ ಶಾಲಾ ಕಾಲೇಜುಗಳನ್ನು ಆರಂಭಿಸಿ ಈ ಭಾಗದ ಮಹಿಳೆಯರು ಶೈಕ್ಷಣಿಕವಾಗಿ ಮುಂದುವರೆಯಲು ಕಾರಣಿಕರ್ತರಾಗಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ದೇಶಕ್ಕಾಗಿ ಅನೇಕ ಮಹಾಪುರುಷರು ರಕ್ತ ಹರಿಸಿ, ತಮ್ಮ ಜೀವ ತ್ಯಾಗ ಮಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಪುರುಷರ ಜೊತೆಗೆ ಅನೇಕ ಮಹಿಳೆಯರು ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೆ ತೆತ್ತಿದ್ದಾರೆ. ಈ ಎಲ್ಲಾ ಮಹನೀಯರು ಸಲ್ಲಿಸಿದ ಸೇವೆ ಮರೆಯಲಾರದ ಸೇವೆಯಾಗಿದ್ದು, ಮಹಾತ್ಮ ಗಾಂಧಿಜೀಯವರು ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿ ಪೂಜ್ಯ ದೊಡ್ಡಪ್ಪ ಅಪ್ಪ ಅವರನ್ನು ಭೇಟಿ ಮಾಡಿ ದರ್ಶನಾಶೀರ್ವಾದ ಪಡೆದು ಸ್ವಾತಂತ್ರ್ಯ ಹೋರಾಟದ ವಿಚಾರಗಳು ಹಂಚಿಕೊಂಡಿದ್ದರು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರ ಬದುಕಿನ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿದ ಸ್ವಾತಂತ್ರ್ಯ ಹೋರಾಟಗಾರ ಶಾಂತಯ್ಯ ಮಠ ಅವರು ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ಸೈನಿಕರಾಗಿ ದೇಶಕ್ಕಾಗಿ ತಾವು ಮಾಡಿದ ಕಾರ್ಯಗಳು, ಪಟ್ಟ ಕಷ್ಟಗಳು, ಯುದ್ಧದಲ್ಲಿ ಹೋರಾಡಿದ ಅನುಭವಗಳನ್ನು ಮೇಲುಕು ಹಾಕಿದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿಜಿಯವರು ಪೂಜ್ಯ ದೊಡ್ಡಪ್ಪ ಅಪ್ಪಾ ಅವರನ್ನು ಭೇಟಿಯಾಗಿ ಮಾತನಾಡುತ್ತಿರುವ ಚಿತ್ರವನ್ನು ಉದ್ಘಾಟಿಸಲಾಯಿತು. ಸ್ವಾಗತ ಮತ್ತು ಪ್ರಾಸ್ತಾವಿಕ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಾನಕಿ ಹೊಸುರ ಮಾಡಿದರು.
ಕಾರ್ಯಕ್ರಮದ ನಿರೂಪಣೆ ಪತ್ರಿಕೋದ್ಯಮ ವಿಭಾಗದ ಕೃಪಾಸಾಗರ ಗೊಬ್ಬುರ ಮಾಡಿದರೆ, ಅತಿಥಿಗಳ ಪರಿಚಯ ವಾಣಿಜ್ಯ ವಿಭಾಗದ ಡಾ.ಸಿದ್ದಮ್ಮ ಗುಡೇದ, ಆಂಗ್ಲ ವಿಭಾಗದ ಪದ್ಮಜಾ ವೀರಶೆಟ್ಟಿ ಮಾಡಿದರು.
ಸಂಗೀತ ವಿಭಾಗದ ವೀರಭದ್ರಯ್ಯ ಸ್ಥಾವರಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎನ್‍ಎಸ್‍ಎಸ್ ಅಧಿಕಾರಿ ಪ್ರಭಾವತಿ ಹೆಚ್ ವೇದಿಕೆ ಮೇಲಿದ್ದರು.
ಕಾರ್ಯಕ್ರಮಮದಲ್ಲಿ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ.ಸಂಗೀತಾ ಪಾಟೀಲ, ದೀಶಾ ಮೆಹತಾ, ವೀಣಾಮಠ, ದಾಕ್ಷಾಯಣಿ ಕಾಡಾದಿ, ಕಲ್ಪನಾ ಡಿ., ಕು.ಶ್ರದ್ಧಾ ಪುರಾಣಿಕ, ರೂಪಾ ಕುಲಕರ್ಣಿ, ಶಾಂತಲಿಂಗ ಬೋಧಕೇತರ ಸಿಬ್ಬಂದಿ ವಿದ್ಯಾ ರೇಷ್ಮಿ, ವಿನೋದ ಹಳಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಶಶಿಕಲಾ ಪಾರಾ, ನೀಲಾಂಬಿಕಾ ಮತ್ತು ವಿದ್ಯಾರ್ಥಿನಿಯರಿದ್ದರು.