ಚಿಂಚೋಳಿ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರಿನ ಗದ್ದೆಯಾಗಿ ಬದಲಾವಣೆ: ದುರಸ್ಥಿಗೆ ಆಗ್ರಹ

0
45

ಕಲಬುರಗಿ: ಇಲ್ಲಿನ ಕನಕಪುರ ಗ್ರಾಮ ಪಂಚಾಯಿತಿ ವ್ಯಪ್ತಿಯ ತಾಜಲಪುರ ಗ್ರಾಮ ದಿಂದ ಮರಪಳ್ಳಿ  ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆಗಳು ಹಾಳಾಗಿ ಹೋಗಿ ಕೆಸರಿನ ಗದ್ದೆಗಳಾಗಿ ನಿರ್ಮಾಣವಾಗಿವೆ.

ಗ್ರಾಮದ ನಿವಾಸಿಗಳು ಪ್ರತಿದಿನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಸೇನೆಯ ತಾಲ್ಲೂಕ ಸಂಘಟನಾ ಕಾರ್ಯದರ್ಶಿ  ಸುರೇಶ ರಾಣಾಪುರ ತಿಳಿಸಿ, ಹದಗೆಟ್ಟಿರುವ ಈ ರಸ್ತೆಯನ್ನು ದುರಸ್ತಿ ಪಡಿಸಿ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು  ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಆದ್ದರಿಂದ ಸಂಬಂದ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಗ್ರಾಮದ ಜನರ ಬವಣೆಗೆ ಪರಿಹಾರ ಕಲ್ಪಿಸುವ  ಮೂಲಕ  ತಾಜಲಾಪುರ್  ಗ್ರಾಮಸ್ಥರ ಸಂಕಷ್ಟ ನಿವಾರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಸಂಸದ ಡಾ. ಉಮೇಶ್ ಜಾಧವ ಅವರ ಪುತ್ರ ಡಾ. ಅವಿನಾಶ ಜಾಧವ ಪ್ರತಿನಿಧಿಸುತ್ತಿರುವ ರಾಜಕೀಯ ಹಿನ್ನೆಲೆ ಇರುವ ಈ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳು ಇವೆ. ಮೂಲ ಭೂತ ಸೌಕರ್ಯಗಳಾದ ಕುಡಿಯುವ ನೀರು,ವಿದ್ಯುತ್, ರಸ್ತೆ ಇನ್ನಿತರ ಸೌಲಭ್ಯಗಳು ಈ ವರೆಗೆ ಮರೀಚಿಕೆಯಾಗಿವೆ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

advertisement
advertisement

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here