ಕಲಬುರಗಿ: ತಾಲೂಕಿನ ನಂದಿಕೂರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ “ಉಚಿತ ಕೋವಿಡ್ ಲಸಿಕಾ ಮೆಗಾ ಮೇಳ “ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ ಜೋತ್ಸ್ಯಾ ಅವರು ಚಾಲನೆ ನೀಡಿದರು.
ನಂದಿಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊವೀಡ್ ಲಸಿಕಾಕರಣ ಕಾರ್ಯಕ್ರಮವನ್ನು ಹೆಚ್ಚಿನ ಪ್ರಮಾಣದಲ್ಲಿ ಅತೀ ಉತ್ಸಾಹದಿಂದ ಕೈಗೊಂಡಿದ್ದಕ್ಕೆ ನಂದಿಕೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇನ್ನೂ ಶೇ. 100 ರಷ್ಟು ಕೋವಿಡ್ ಲಸಿಕೆ ಕೊಡಿಸಲು ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ ತಹಶೀಲ್ದಾರ ಪ್ರಕಾಶ ಕುದುರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂದೀಪ ಗುತ್ತೆದಾರ, ಕಾರ್ಯದರ್ಶಿ ಮಹಾನಂದ ಸಿಂಗೆ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ ದೊಡ್ಡಮನಿ, ಚಂದ್ರಕಾಂತ ಪೂಜಾರಿ, ಚಂದ್ರಕಾಂತ ಸಿರಸಗಿ, ರಾಜುಬಾಯಿ ಚವ್ಹಾಣ, ಲಕ್ಕಪ್ಪ ಪೂಜಾರಿ, ಸೂರ್ಯಕಾಂತ ಕಣ್ಣಿ, ಶರಣು ಚವ್ಹಾಣ, ರಾಚಯ್ಯಾ ನಂದಿಕೂರ, ದಿನೇಶ ದೊಡ್ಡಮನಿ ಉಪಸ್ಥಿತರಿದ್ದರು