ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಗಣೇಶ ದೇವಸ್ಥಾನ ಪ್ರತಿಷ್ಠಾಪನೆ

0
41

ಕಲಬುರಗಿ; ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದ ಎರಡನೇ ಮುಖ್ಯದ್ವಾರದಲ್ಲಿ ಬುಧವಾರ ಹೊಸದಾಗಿ ನಿರ್ಮಿಸಲಾದ ಗಣೇಶನ ದೇವಸ್ಥಾನವನ್ನು ಚೌಡಪುರಿ ಮಠದ ಶ್ರೀ ರಾಜಶೇಖರ ಸ್ವಾಮೀಜಿ ಹಾಗೂ ಪುರೋಹಿತರು ಮತ್ತು ಪಂಡಿತರ ವೈದಿಕ ಸ್ತೋತ್ರ ಪಠಣದ ಮೂಲಕ ಪ್ರತಿ?ಪಿಸಲಾಯಿತು.

ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ, ಕುಮಾರಿ ಶಿವಾನಿ.ಎಸ್.ಅಪ್ಪಾ, ಕುಮಾರಿ ಕೋಮಲ್.ಎಸ್.ಅಪ್ಪಾ ಮತ್ತು ಕುಮಾರಿ ಮಹೇಶ್ವರಿ. ಎಸ್.ಅಪ್ಪಾ ಅವರೊಂದಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಹೊಸದಾಗಿ ಪ್ರತಿ?ಪಿಸಿದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಕಾ ಮತ್ತು ಹಣಕಾಸು ಅಧಿಕಾರಿ ಪ್ರೊ.ಕಿರಣ್ ಮಾಕಾ ಜತೆಗೊಡಿ ಆರಂಭಿಕ ಪೂಜೆಗಳು ಮತ್ತು ಹೋಮಗಳನ್ನು ನೆರವೆರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ ನಿರಂಜನ್.ವಿ.ನಿಷ್ಠಿ, ಸಮ ಉಪಕುಲಪತಿಗಳಾದ ಪ್ರೊ.ವಿ.ಡಿ.ಮೈತ್ರಿ ಮತ್ತು ಎನ್ ಎಸ್ ದೇವರಕಲ್, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಡಾ ಬಸವರಾಜ ಮಠಪತಿ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here