ಗೋದುತಾಯಿ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾರ್ಯಾಗಾರ

0
42

ಕಲಬುರಗಿ : ಯಾವುದೇ ಚಿತ್ರಗಳು ಉತ್ತಮವಾಗಿ ಮೂಡಿಬರಬೇಕಾದರೆ ಚಿತ್ರಕಲಾವಿದನಲ್ಲಿ ಸೃಜನಶೀಲತೆ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಚಿತ್ರಕಲಾ ವಿಭಾಗದ ಮುಖ್ಯಸ್ಥೆ ಡಾ.ಶಾಂತಲಾ ನಿಷ್ಠಿ ಅವರು ತಿಳಿಸಿದರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ’ಬೆಸ್ಟ್ ಓಟ್ ಆಫ್ ವೆಸ್ಟ್’ ಎಂಬ ವಿಷಯದ ಮೇಲೆ ಎರಡು ದಿನಗಳ ಕಾಂiiಗಾರವನ್ನು ಉದ್ಘಾಟಿಸಿ ಮಾತನಾಡಿ, ಎಷ್ಟೋ ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳನ್ನು ಸಿದ್ದಗೊಳಿಸುವ ಕ್ರಿಯಾಶೀಲತೆ ಗೊತ್ತಿರಬೇಕು. ಅಲ್ಲದೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಬೆಳೆಸಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಉತ್ತಮ ಕೌಶಲ್ಯದಿಂದ ಸುಂದರವಾದ ಚಿತ್ರಗಳು ಮೂಡಲು ಸಾಧ್ಯವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶರಣಬಸವ ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದ ಮುಖ್ಯಸ್ಥ ಡಾ.ಎಸ್.ಎಮ್.ನೀಲಾ ಮಾತನಾಡಿ, ಚಿತ್ರಕಲೆ ಒಂದು ತಪಸ್ಸಾಗಿದ್ದು, ಶರಣಬಸವೇಶ್ವರ ಸಂಸ್ಥಾನ ಚಿತ್ರಕಲೆಗೆ ಮೊದಲಿನಿಂದಲೂ ಆದ್ಯತೆ ನೀಡುತ್ತಾ ಬಂದಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ದೊಡ್ಡ ಚಿತ್ರಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ವಿದ್ಯಾರ್ಥಿಗಳು ಚಿತ್ರಕಲೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಈ ಭಾಗ ಚಿತ್ರಕಲೆ ಮತ್ತು ಸಂಗೀತದಲ್ಲಿ ಮಹತ್ವ ಪಡೆಯಲು ಮುಖ್ಯ ಕಾರಣ ಎಂದರೆ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು. ಈ ಭಾಗಕ್ಕೆ ಚಿತ್ರಕಲೆ ಪರಿಚಯಸಿ ಚಿತ್ರಕಲೆ ವಿಭಾಗವನ್ನು ಆರಂಭಿಸಿ, ನಾಡಿಗೆ ಅನೇಕ ಶ್ರೇಷ್ಠ ಚಿತ್ರಕಲಾವಿರನ್ನು ಕೊಡುಗೆಯಾಗಿ ನೀಡಿರುವುದು ಶರಣಬಸವೇಶ್ವರ ಸಂಸ್ಥಾನ. ವಿದ್ಯಾರ್ಥಿಗಳು ಚಿತ್ರಕಲೆ ವಿಭಾಗದ ಪ್ರಯೋಜನ ಪಡೆಯಬೇಕೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮವನ್ನು ಶ್ರೀಮತಿ ಜಾನಕಿ ಹೊಸೂರ ನಿರೂಪಿಸಿ, ವಂದಿಸಿದರು. ಶ್ರೀಮತಿ ವೀಣಾ ಮಠ ಸ್ವಾಗತಿಸಿದರು. ವೇದಿಕೆ ಮೇಲೆ ಸವಿತಾ ಹಿರೇಮಠ ಇದ್ದರು. ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here