ಕಲಬುರಗಿ: ರಾಜ್ಯದ ಮೂರು ಮಹಾನಗರ ಪಾಲಿಕೆ ಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ನಕಲಿ ಮತದಾನ ಮಾಡಲು ಯತ್ನಿಸಿರುವ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ಕಾರ್ಯಾಕರ್ತರ ನಡುವೆ ಗಲಾಟಿ ನಡೆದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಪಾಲಿಕೆ ವಾರ್ಡ್ ಸಂಖ್ಯೆ 13ರಿನ ಮತಗಟ್ಟೆ ಸಂಖ್ಯೆ 106 ಮತ್ತು 106/1 ಗುಲಡನ್ ಬರ್ಡ್ಸ್ ಶಾಲೆಯಲ್ಲಿ ಮಹಿಳೆ ಓರ್ವಳು ನಕಲಿ ಮತದಾನಕ್ಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಸ್ವತಂತ್ರ ಅಭ್ಯರ್ಥಿ ನಾದೇರಾ ನಫೀಸ್ ಮಹಿಳೆಯ ಮತದಾನ ತಡೆಹಿಡಿದರು. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿರುವ ಆಮಿರ್ ಅಹ್ಮದ್ ಮತ್ತು ಖೂಸ್ರೊ ಅಹ್ಮದ್ ಮತ್ತು ಸ್ವಾತಂತ್ರ ಅಭ್ಯರ್ಥಿಯೊಂದಿಗೆ ಗಲಾಟೆ ನಡೆಸಿದರು.
ಘಟನೆಯನ್ನು ತಡೆಯಲು ಬಂದಿದ ಸ್ವತಂತ್ರ ಅಭ್ಯರ್ಥಿಯ ಮಗ ಶೋಹೆಬ್ ಅಹ್ಮದ್ ಅವರ ಮೇಲೆ ಮರಕಾಸ್ತ್ರದಿಂದ ಹಲ್ಲೆ ನಡೆದಿತ್ತು. ಇದರಿಂದ ಕೆಲಹೊತ್ತು ಮತಗಟ್ಟೆಯಲ್ಲಿ ಗೊಂದಲದ ವಾತಾವರಣೆ ನಿರ್ಮಾಣವಾಯಿತು.
ಘಟನೆಯಲ್ಲಿ ಗಾಯಗೊಂಡ ಶೋಹೆಬ್ ಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ವಾತಂತ್ರ ಅಭ್ಯರ್ಥಿ ತಂದೆಯಾದ ಎಕ್ಬಾಲ್ ಅಹ್ಮದ್ ಸಿನ್ನಿಫರೋಶ್ ತಿಳಿಸಿದ್ದಾರೆ.
ಮತಗಟ್ಟೆಯಲ್ಲಿ ಇಂತಹ ಘಟನೆ ನಡೆಸಿದವರ ಮೇಲೆ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಸಿನ್ನಿಫರೋಶ್ ಮನವಿ ಮಾಡಿದ್ದಾರೆ.