ತಂದೆ ತಾಯಂದಿರೇ ಮೊದಲ ಗುರು, ಗುರುವಿನ ಸ್ಥಾನದಲ್ಲಿಡಿ : ವೃದ್ಧಶ್ರಮದಲ್ಲಲ್ಲ. 

0
10

ಕಲಬುರಗಿ: ನಗರದ ಸೈಯ್ಯದ ಚಿಂಚೊಳಿ ರಸ್ತೆಯಲ್ಲಿರುವ ಮಹಾದೇವಿ ವೃದ್ಧಾಶ್ರಮದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಖ್ಯ ಅತಿಥಿಗಳಾಗಿ ಆಗಮಿಸಿದ್ದ  ನಗರೇಶ್ವರ ಶಾಲೆಯ ಮುಖ್ಯ ಗುರುಗಳಾದ ಶ್ರೀ ಶ್ರೀನಿವಾಸ ಮರಿ ಅವರು ಮಾತನಾಡಿ “ಹೀರಿಯರಿಗೆ ಗೌರವ ಕೊಡುವ ಸಂಸ್ಕೃತಿ ಕಡಿಮೆ ಆಗ್ತಾ ಇದೆ ಅದಕ್ಕಾಗಿ ವೃದ್ಧಶ್ರಮಗಳು ಹೆಚ್ಚುತ್ತಿವೆ, ಇವತ್ತಿನ ಇಂತಹ ಪರಿಸ್ಥಿತಿಯಲ್ಲಿ ಇವತ್ತಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವೃದ್ಧಶ್ರಮದಲ್ಲಿ ಮಾಡಿದ್ದು ಪ್ರತಿಯೊಬ್ಬರಿಗೂ ಮಾದರಿ ಎಂದರು”.

Contact Your\'s Advertisement; 9902492681

ಈ ಕಾರ್ಯಕ್ರಮದ ಅಂಗವಾಗಿ ವೃದ್ಧಾಶ್ರಮದಲ್ಲಿಯ ಹಿರಿಯರಿಗೆಲ್ಲ ಹೊಸ ಉಡುಪುಗಳು, ಸೀರೆ, ಶರ್ಟ್-ಪ್ಯಾಂಟ್, ಮಾಸ್ಕ್ ಮತ್ತು ಪಾದರಕ್ಷೆಗಳನ್ನು ಗೌರವ ರೂಪದಲ್ಲಿ ನೀಡಲಾಯಿತು,  ಜೊತೆಗೆ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ನಗರೇಶ್ವರ ಶಾಲೆಯ ಮುಖ್ಯ ಗುರುಗಳಾದ ಶ್ರೀನಿವಾಸ ಮರಿ, ನಾಲ್ಕುಚಕ್ರ ಮುಖ್ಯಸ್ಥರಾದ ಮಾಲಾ ದಣ್ಣೂರ್, ಮಾಲಾ ಕಣ್ಣಿ, ಕಲ್ಯಾಣರಾವ್ ಪಾಟೀಲ್ ಕಣ್ಣಿ, ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಸದಸ್ಯರಾದ ವಿಜಯಲಕ್ಷ್ಮಿ ಹೀರೆಮಠ್, ಜ್ಯೋತಿ ಪಾಟೀಲ್, ಜ್ಯೋತಿ ಕೋಟನೂರ್, ಪ್ರಸಾದ್ ಜೋಷಿ, ನಾಗರಾಜ್ ಹೆಂಬಾಡಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here