ಸುರಪುರ: ಈಬಾರಿಯ ಗಣೇಶ ಹಬ್ಬ ಸರಕಾರದ ಮಾರ್ಗಸೂಚಿಗಳಂತೆ ಆಚರಿಸಲು ಸರಕಾರ ಈಗಾಗಲೇ ಆದೇಶ ಹೊರಡಿಸುರುವಂತೆಯೇ ಗಣೇಶನ ವಿಸರ್ಜನೆಗೂ ತಾಲೂಕು ಆಡಳಿತ ನಿಗದಿತ ಸ್ಥಳದಲ್ಲಿಯೆ ಗಣೇಶನನ್ನು ವಿಸರ್ಜಿಸುವಂತೆ ತಿಳಿಸಿದೆ.
ಈ ಕುರಿತು ವಿಸರ್ಜನೆಗೆ ಸ್ಥಳ ಗುರುತಿಸಿರುವ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ನಗರದ ಕುಂಬಾರಪೇಟೆಯ ಬಳಿಯ ಜಲ ಶುದ್ಧೀಕರಣ ಘಟಕದ ಬಳಿಯಲ್ಲಿನ ಬಾವಿಯಲ್ಲಿ ನಗರದ ಎಲ್ಲೆಡೆ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಗಳನ್ನು ಇದೇ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕೆಂದು ತಿಳಿಸಿದ್ದಾರೆ.ಈ ಸ್ಥಳದಲ್ಲಿ ಬ್ಯಾರಿಕೇಡ್ ಮತ್ತು ಬೆಳಕಿನ ವ್ಯವಸ್ಥೆಯನ್ನೂ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಹಾಗು ನೈರ್ಮಲ್ಯ ನಿರೀಕ್ಷಕ ಶೀವಪುತ್ರ ಅವರು ಕೂಡ ತಹಸೀಲ್ದಾರರ ಜೊತೆಗಿದ್ದು ಸ್ಥಳಗುರುತು ಕಾರ್ಯದಲ್ಲಿ ತೊಡಗಿದ್ದರು.