ಸುರಪುರ: ಸರಕಾರದ ಆದೇಶದಂತೆ ತಾಲೂಕಿನಾದ್ಯಂತ ಸೋಮವಾರ ಬೆಳಿಗ್ಗೆ ೬ ಮತ್ತು ೭ನೇ ತರಗತಿ ಶಾಲೆಗಳು ಆರಂಭಗೊಂಡಿದ್ದು ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷವಾಗಿ ಬರಮಾಡಿಕೊಳ್ಳಲಾಗಿದೆ.
ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಬೆಳಿಗ್ಗೆ ಆಗಮಿಸಿದ ಮಕ್ಕಳಿಗೆ ಶಾಲಾ ಸುಧಾರಣಾ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಕಾಮತ್ ಮತ್ತಿತರೆ ಮುಖಂಡರು ಹಾಗು ಶಿಕ್ಷಕರಾದ ಮಲ್ಲಿನಾಥ ಮತ್ತು ರಂಗನಾಥ ಅವರು ಮಕ್ಕಳಿಗೆ ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು.ಅಲ್ಲದೆ ಎಲ್ಲಾ ಮಕ್ಕಳಿಗೆ ಥರ್ಮಲ ಸ್ಕ್ಯಾನಿಂಗ್ ಮಾಡಲಾಯಿತು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದರು.
ಅದೇರೀತಿಯಾಗಿ ತಾಲೂಕಿನ ತಿಂಥಣಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳಿಗ್ಗೆ ಮಕ್ಕಳು ಆಗಮಿಸುತ್ತಿದ್ದಂತೆ ಎಸ್ಡಿಎಮ್‌ಸಿ ಅಧ್ಯಕ್ಷ ಮಾನಪ್ಪ ಯರಡೋಣಿ ಮಕ್ಕಳಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು.ಶಾಲೆಯ ಮುಖ್ಯಗುರು ಮಹಾಂತಪ್ಪ ಎಲ್ಲಾ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ನಡೆಸಿದರು.ಈ ಸಂದರ್ಭದಲ್ಲಿ ಎಪಿಎಮ್‌ಸಿ ಸದಸ್ಯ ಖಾಜಾಸಾಬ್ ಗುಂತಗೋಳ,ಮುಖಂಡರಾದ ಗಂಗಾಧರ ನಾಯಕ್,ಗ್ರಾ.ಪಂ ಸದಸ್ಯ ಬಾಬು ಹವಲ್ದಾರ್,ಹನುಮಂತ ದೊಡ್ಮನಿ,ಮೈಬೂಬ ಮುಲ್ಲಾ,ಮೌನೇಶ ಕುರ್ಲಿ,ಮೌನೇಶ ಇತರರಿದ್ದರು.
ನಗರದ ಖುರೇಶಿ ಮೊಹಲ್ಲಾದಲ್ಲಿ ಮುಖ್ಯಗುರು ಸ್ಯಾಮುವೆಲ್ ಅವರು ಎಲ್ಲಾ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.ಅಲ್ಲದೆ ಎಲ್ಲಾ ಮಕ್ಕಳಿಗೆ ಪುಷ್ಪವೃಷ್ಠಿ ನಡೆಸುವ ಜೊತೆಗೆ ಶಿಕ್ಷಕರು ಮಕ್ಕಳಿಗೆ ದಿನಾಲು ಕಡ್ಡಾಯವಾಗಿ ಮಾಸ್ಕ್ ಧರಿಸಿ ಶಾಲೆಗೆ ಬರುವಂತೆ ಜಾಗೃತಿ ಮೂಡಿಸಿದರು.
ತಾಲೂಕಿನ ದೇವಿಕೆರಾ,ಬಿಜಾಸಪುರ,ಸತ್ಯಂಪೇಟೆ,ದೀವಳಗುಡ್ಡ,ಬಾದ್ಯಾಪುರ ಹಾಗು ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಆಗಮನಕ್ಕಾಗಿ ಸ್ವಾಗತದ ಬ್ಯಾನರ್‌ಗಳನ್ನು ಹಾಕಿ ಜೊತೆಗೆ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಶಾಲೆಯ ಶಿಕ್ಷಕರು ಮತ್ತು ಗ್ರಾಮದ ಮುಖಂಡರು ಬರಮಾಡಿಕೊಂಡರು.ಮೊದಲ ದಿನವೇ ವಿದ್ಯಾರ್ಥಿಗಳು ಹೆಚ್ಚೆಚ್ಚು ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದು ಕಂಡುಬಂತು.