ಚಿಂಚೋಳಿ: ತಾಲೂಕಿನ ಬೆಡಸೂರ ಗ್ರಾಮ ಪಂಚಾಯಿತಿ ವ್ಯಪ್ತಿಯ ಬೆಡಸೂರ ತಾಂಡಾ ದಿಂದ ಮುಕರಂಬ ಕ್ರಾಸ್ ನಡುವೆ ಇರುವಂತ ರಸ್ತೆ ಸಂಪರ್ಕ ಹದಗೆಟ್ಟಿದ್ದು ಪ್ರಯಾಣಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಕಲಬುರ್ಗಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಕಲ್ಪಿಸುವ ಪ್ರಮುಖ ಮುಖ್ಯರಸ್ತೆಯಾಗಿದೆ ತೀರಾ ಹದಗೆಟ್ಟಿದ್ದು, ಕೆಸರಿನ ಗದ್ದೆಗಳಾಗಿ ನಿರ್ಮಾಣವಾಗಿವೆ. ಮುಖ್ಯವಾಗಿ ಈ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿದಿನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಸೇನೆಯ ತಾಲ್ಲೂಕ ಸಂಘಟನಾ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ ರಾಣಾಪುರ ಅವರು ತಿಳಿಸಿದ್ದಾರೆ.
ಹದಗೆಟ್ಟಿರುವ ಈ ರಸ್ತೆಯನ್ನು ದುರಸ್ತಿ ಪಡಿಸಿ ಪ್ರಾಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಸಂಬಂದ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಜನರ ಬವಣೆಗೆ ಪರಿಹಾರ ಕಲ್ಪಿಸುವ ಮೂಲಕ ಸಾರ್ವಜನಿಕರ ಸಂಕಷ್ಟ ನಿವಾರಣೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.