ವಾಡಿ ಪುರಸಭೆ ಉಪ ಚುನಾವಣೆ: ಅರಳಿದ ಕಮಲ

0
21

ಚಿತ್ತಾಪುರ: ತಾಲೂಕಿನ ವಾಡಿ ಪುರಸಭೆಯ ಸದಸ್ಯರು ಕೆಲವು ತಿಂಗಳುಗಳ ಹಿಂದೆ ಕರೋನಾ ಮಹಾಮಾರಿಗೆ ಮೃತಪಟ್ಟಿದ್ದರ ಹಿನ್ನೆಲೆಯಲ್ಲಿ ಮೃತ ಸದಸ್ಯರಿಂದ ತೆರುವಾದ ಸ್ಥಾನಕ್ಕೆ ಚುನಾವಣಾ ನಡೆದಿತ್ತು.ಸೋಮವಾರ ಫಲಿತಾಂಶ ಹೊರಬಿದ್ದಿದು,ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಜಯವಾಗಿದ್ದು,ಕಾಂಗ್ರೆಸ್ ಸೋಲಿನ ರುಚಿಯನ್ನು ಅನುಭವಿಸಿದೆ.

ವಾರ್ಡ್ ನಂಬರ್ 4ರ ಬಿಜೆಪಿ ಅಭ್ಯರ್ಥಿ ರವಿ ಮಾನುಸಿಂಗ್ ನಾಯಕ್ ಒಟ್ಟು 580 ಮತಗಳನ್ನು ಪಡೆಯುವ ಮೂಲಕ 187 ಮತಗಳ ಅಂತರದಿಂದ ಜಯದ ಮಾಲೆ ಮುಡಿಗೇರಿಸಿಕೊಂಡಿದ್ದಾರೆ.ಇವರ ಪ್ರತಿ ಸ್ಪರ್ದಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಚಂದು ಪವಾರ್ 373 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

Contact Your\'s Advertisement; 9902492681

ಇನ್ನು ಕಾಂಗ್ರೆಸ್ ಹಿಡಿತದಲ್ಲಿದ ವಾರ್ಡ ನಂಬರ್ 23ರಲ್ಲಿ ಬಿಜೆಪಿ ಅಭ್ಯರ್ಥಿ ಅಂಬರೇಶ ತಿಮ್ಮಯ್ಯ ಕುರುಕುಂಟಾ ಒಟ್ಟು 521 ಮತಗಳನ್ನು ಪಡೆಯುವ ಮೂಲಕ 124 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿದ ಕಾಂಗ್ರೆಸ್ ಅಭ್ಯರ್ಥಿ ಪರಶುರಾಮ ಹನಮಂತ್ ಕಟ್ಟಿಮನಿ 397 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಶಾಂತಿಯುತವಾಗಿ ಅಚ್ಚುಕಟ್ಟಾಗಿ ಮತಗಳ ಎಣಿಕೆ ಕಾರ್ಯ ನಡೆದಿದೆ ಎಂದು ಚುನಾವಣಾಧಿಕಾರಿ ಶ್ರೀಧರ್ ಸಾರವಾಡ್ ಹಾಗೂ ತಹಶೀಲ್ದಾರ್ ಉಮಾಕಾಂತ ಹಳ್ಳೆ ನಮ್ಮ ಪ್ರತಿನಿಧಿಗೆ ತಿಳಿಸಿದ್ದಾರೆ.

ಬಿಜೆಪಿ ಸಂಭ್ರಮಾಚರಣೆ: ಉಪಚುನಾವಣೆ ಬಿಜೆಪಿ ಗೆಲವು ಹಿನ್ನಲೆಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ನೀಲಕಂಠರಾವ್ ಪಾಟೀಲ್, ಮುಖಂಡರಾದ ಅರವಿಂದ್ ಚೌಹಾಣ್, ವಿಠಲ್ ನಾಯಕ್,ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ಎಮ್ಮೆನೂರ,ನಾಗರಾಜ್ ಹೂಗಾರ್, ರಾಮದಾಸ್ ಚೌಹಾಣ್, ಮಲ್ಲಿಕಾರ್ಜುನ ಪೂಜಾರಿ, ವೀರಣ್ಣಾ ಯಾರಿ, ರಾಹುಲ್ ಸಿಂದಗಿ,ಪ್ರಭು ಗಂಗಾಣಿ,ಬಾಲಾಜಿ ಬುರಬರೆ,ಮಹಮ್ಮದ್ ಯೂನಿಸ್  ಸೇರಿದಂತೆ ಹಲವಾರು ಗುಲಾಲ್ ಎರಚಿ ಸಂಭ್ರಮಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here