ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಶಾಂತಿಸಭೆ

0
202

ಶಹಾಬಾದ: ಗಣೇಶ ಉತ್ಸವದ ವೇಳೆ ಪಟಾಕಿ ಸಿಡಿಸುವುದು, ಗುಲಾಲು ಎರೆಚುವುದು ಹಾಗೂ ಡಿಜೆ ಹಚ್ಚುವುದನ್ನು ನಿಷೇದಿಸಲಾಗಿದ್ದು, ಒಂದು ವೇಳೆ ಕಂಡು ಬಂದರೆ ಕಾನೂನು ಕ್ರಮಕ್ಕೆ ಮುಂದಾಗಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.

ಅವರು ಮಂಗಳವಾರ ನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಆಯೋಜಿಸಲಾದ ಶಾಂತಿಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಗಣೇಶ ಹಬ್ಬಗಳನ್ನು ನಾವೆಲ್ಲರೂ ಸಂತೋಷದಿಂದ ಆಚರಿಸಬೇಕೆಂಬುದು ನಿಜ.ಆದರೆ ಈ ಉತ್ಸವಗಳು ಬದುಕಿಗೆ ಮಾರಕವಾಗಬಾರದು. ಆದ್ದರಿಂದ ಈ ಬಾರಿ ಗಣೇಶ ಹಬ್ಬದಲ್ಲಿ ೪ಅಡಿಗಿಂತ ಎತ್ತರದ ಮೂರ್ತಿಗಳನ್ನು ಕೂಡಿಸುವುದಕ್ಕೆ ಅವಕಾಶವಿಲ್ಲ.ಅಲ್ಲದೇ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಕೂಡಿಸಬೇಕು. ಗಣೇಶನ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಹಾಗೂ ಮೆರವಣಿಗೆ ಮಾಡುವಂತಿಲ್ಲ. ಐದು ದಿನಗಳಿಗೆ ಮಾತ್ರ ಕೂಡಿಸಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪನೆ ಮಾಡಬೇಕೆಂದು ಹೇಳಿದರು.

ಡಿವಾಯ್‌ಎಸ್‌ಪಿ ಉಮೇಶ ಚಿಕ್ಕಮಠ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಯಸುವವರು ಸ್ಥಳೀಯ ತಾಲೂಕಾಡಳಿತ,ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಪೂರ್ವ ಅನುಮತಿ ಪಡೆಯತಕ್ಕದ್ದು. ಯಾವುದೇ ಕಾರಣಕ್ಕೂ ಸರ್ಕಾರದ ಆದೇಶವನ್ನು ಉಲ್ಲಂಗಿಸಬಾರದು. ಒಂದು ವೇಳೆ ಉಲ್ಲಂಘಿಸಿದರೇ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಪೌರಾಯುಕ್ತ ಕೆ.ಗುರಲಿಂಗಪ್ಪ ಮಾತನಾಡಿ, ಸರ್ಕಾರದ ಮಾರ್ಗಸೂಚಿಗಳನ್ನು ಅರಿತುಕೊಂಡು ಗಣೇಶ ಹಬ್ಬವನ್ನು ಆದಷ್ಟು ಸರಳವಾಗಿ ಆಚರಿಸಿ.ಯಾವುದೇ ಕಾರಣಕ್ಕೂ ಜನಸಂದಣಿಯಾಗದಂತೆ ನೋಡಿಕೊಳ್ಳಿ.ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಹೇಳಿದರು.

ಪಿಐ ಸಂತೋಷ ಹಳ್ಳೂರ್ ಮಾತನಾಡಿ, ಸಾರ್ವಜನಕವಾಗಿ ರಸ್ತೆಗಳಲ್ಲಿ ನಿಂತು ವಾಹನಗಳನ್ನು ತಡೆದು ಹೆದರಿಸುವ ಮೂಲಕ ಚಂದಾ ವಸೂಲಿ ಮಾಡುವಂತಿಲ್ಲ.ಪೊಲೀಸ್ ಮುಕ್ತ ಹಬ್ಬಗಳ ಆಚರಣೆಯಾದಾಗ ಮಾತ್ರ ಕೋಮು ಸೌಹಾರ್ದತೆಗೆ ಅರ್ಥ ಬರುತ್ತದೆ.ಅಲ್ಲದೇ ಇನ್ನೊಬ್ಬರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಆಚರಣೆಗಳಾಗಬಾರದೆಂದು ಹೇಳಿದರಲ್ಲದೇ, ಸರ್ಕಾರದ ಆದೇಶವನ್ನು ಓದಿ ಹೇಳಿದರು. ಪ್ರೋಬೆಷನರಿ ಡಿವಾಯ್‌ಎಸ್‌ಪಿ ವೀರಯ್ಯ ಹಿರೇಮಠ, ಪಿಎಸ್‌ಐಗಳಾದ ಚೇತನ, ಗಂಗಮ್ಮ, ಚೈತ್ರ ವೇದಿಕೆಯ ಮೇಲಿದ್ದರು.

ನಗರದ ಗಣ್ಯರಾದ ಅರುಣ ಪಟ್ಟಣಕರ್, ಡಾ.ರಶೀದ ಮರ್ಚಂಟ್,ಕುಮಾರ ಚವ್ಹಾಣ,ಮೃತ್ಯುಂಜಯ್ ಹಿರೇಮಠ, ನಾಗರಾಜ ಮೇಲಗಿರಿ,ಲೋಹಿತ್ ಕಟ್ಟಿ, ಇನಾಯತಖಾನ ಜಮಾದಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here