ಕಲಬುರಗಿ: ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಅಧಿಕಾರಿಗಳು ಇದೇ ಸೆಪ್ಟೆಂಬರ್ 14 ರಿಂದ 29 ರವರೆಗೆ ಪ್ರತಿದಿನ ಬೆಳಗಿನ 11 ರಿಂದ ಸಂಜೆ 4 ಗಂಟೆಯವರೆಗೆ ಕಲಬುರಗಿ ಜಿಲ್ಲೆಯ ಕೆಳಕಂಡ ತಾಲೂಕಿನಲ್ಲಿ ಕಲಬುರಗಿ ಎಸಿಬಿ ಪೊಲೀಸ್ ಠಾಣಾ ಮಟ್ಟದ ಜನಸಂಪರ್ಕ ಸಭೆಗಳನ್ನು ನಡೆಸಲಿದ್ದಾರೆ ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಆರಕ್ಷಕ ಉಪಾಧೀಕ್ಷಕರು ತಿಳಿಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ (ಮೊಬೈಲ್ ಸಂಖ್ಯೆ 9480806310) ಇದೇ ಸೆಪ್ಟೆಂಬರ್ 14 ರಂದು ಅಫಜಲಪುರ ತಾಲೂಕು ಪ್ರವಾಸಿ ಮಂದಿರ, ಸೆಪ್ಟೆಂಬರ್ 17 ರಂದು ಕಮಲಾಪುರ ಗ್ರಾಮ ಪಂಚಾಯತ್ ಕಾರ್ಯಾಲಯ, ಸೆಪ್ಟೆಂಬರ್ 21 ರಂದು ಆಳಂದ ಪ್ರವಾಸಿ ಮಂದಿರ, ಸೆಪ್ಟೆಂಬರ 24 ರಂದು ಯಡ್ರಾಮಿ ತಾಲೂಕು ಪ್ರವಾಸಿ ಮಂದಿರ ಹಾಗೂ ಸೆಪ್ಟೆಂಬರ್ 28 ರಂದು ಸೇಡಂ ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ನಿರಂಜನ್ ಪಾಟೀಲ (ಮೊಬೈಲ್ ಸಂಖ್ಯೆ 9480806309) ಅವರು ಇದೇ ಸೆಪ್ಟೆಂಬರ್ 15 ರಂದು ಜೇವರ್ಗಿ ತಾಲೂಕು ಪ್ರವಾಸಿ ಮಂದಿರ, ಸೆಪ್ಟೆಂಬರ್ 18 ರಂದು ಕಾಳಗಿ ತಾಲೂಕು ಪ್ರವಾಸಿ ಮಂದಿರ, ಸೆಪ್ಟೆಂಬರ್ 22 ರಂದು ಚಿತ್ತಾಪುರ ತಾಲೂಕು ಪ್ರವಾಸಿ ಮಂದಿರ, ಸೆಪ್ಟೆಂಬರ್ 27 ರಂದು ಶಹಾಬಾದ ಪ್ರವಾಸಿ ಮಂದಿರ ಹಾಗೂ ಸೆಪ್ಟೆಂಬರ್ 29 ರಂದು ಚಿಂಚೋಳಿ ತಾಲೂಕು ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಸಭೆ ನಡೆಸಲಿದ್ದಾರೆ.