ಸೆ. 10ಕ್ಕೆ ಶರಣಬಸವ ವಿಶ್ವ ವಿದ್ಯಾಲಯದ ಮೊದಲ/ ಎರಡನೇ ಘಟಿಕೋತ್ಸವ

0
57

ಕಲಬುರಗಿ: ಇದೇ ತಿಂಗಳ ಸೆಪೆ೦ಬರ್‌ 10 ರಂದು ಬೆಳಿಗ್ಗೆ 11: 45ಕ್ಕೆ ಕಲಬುರಗಿ ನಗರದ ಅಪ ಪಬ್ಲಿಕ್‌ ಸ್ಕೂಲ್‌ ಕಾಂಪಸನಲ್ಲಿ ಟ“ಪೂಜ್ಯ ಬಸವರಾಜಪ್ಪ ಅಪ ಸರಣಾರ್ಥ ಭವನ”ದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪ್ರಥಮ ಮತ್ತು ದ್ವಿತೀಯ ಘಟಿಕೋತ್ಸವ ನಡೆಯಲಿದೆ ಎಂದು ಶರಬಸವೇಶ್ವರ ಸಂಸ್ಥಾನದ ಪೀಠಾಧಿಪತಿ, ಶರಣಬಸವ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಶರಣಬಸಪ್ಪ ಅಪ್ಪಾ ಅವರು ತಿಳಿಸಿದ್ದಾರೆ.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ನನಗೆ ಮತ್ತು ಶರಣಬಸವ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಎಲ್ಲರಿಗೂ ಒಂದು ಐತಿಹಾಸಿಕ ಸ೦ದರ್ಭವಾಗಿದ್ದು, ಇದು ಶರಣಬಸವೇಶ್ವರ ವಿದ್ಯಾ ವರ್ಧಕ ಸ೦ಘದ ಕನಸಿನ ಕೂಸಾಗಿದೆ. ಮತ್ತು ಕಲ್ಯಾಣ ಕರ್ನಾಟಕದ ಎಲ್ಲಾ ಸಾಮಾನ್ಯ ಜನರಿಗೆ. ಐತಿಹಾಸಿಕ ಸಂದರ್ಭವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ನವೀಕರಣ ಇಂಧನ ಖಾತೆ ಸಚಿವರಾದ  ಭಗವ೦ತ ಖೂಬಾ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶರಣಪ್ಪ ವಿ ಹಲ್ಸೆ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ದಯಾನಂದ ಅಗಸರ ಘಟಿಕೋತ್ಸವ ಉದ್ದೇಶಿ ಮಾತನಡುವವರು. ಈ ಸಂದರ್ಭದಲ್ಲಿ ಕಲಬುರಗಿ ಲೋಕಸಭಾ ಸ೦ಸದ ಡಾ.ಉಮೇಶ್‌ ಜಾಧವ್‌ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಟಾಯಿಣಿ ಅವ್ವಾ ಉಪಸ್ಥಿತಿ ವಹಿಸಲಿದ್ದಾರೆ ಎಂದು ತಿಳಿಸಿದರು.

2012ರಲ್ಲಿ ರಾಜ್ಯ ಕಾಯಿದೆಯ ಅನುಸಾರವಾಗಿ ಸ್ಥಾಪಿತವಾದ ಶರಣಬಸವ ವಿಶ್ವವಿದ್ಯಾಲಯವು 2017ರ ಶೈಕ್ಷಣಿಕ ವರ್ಷದಿಂದ ಕಾರ್ಯನಿರ್ವಹಿಸಲು ಆರಂಭಿಸಿತು ಮತ್ತು ವಿವಿಧ ಕಾರಣಗಳಿಂದಾಗಿ ವಿಶ್ವ ವಿದ್ಯಾಲಯದ ವಾರ್ಷಿಕ ಘಟಿಕೋತ್ಸವವನ್ನು ಇಲಿಯವರೆಗೆ ನಡೆಸಲಾಗಲಿಲ್ಲ ಹಾಗೂ ಇದರ ಮೊದಲ ಮತ್ತು ಎರಡನೆಯ ಘಟಿಕೋತ್ಸವವನ್ನು ಆಚರಿಸಲು ಇದೇ ತಿಂಗಳ ಸೆಪ್ಟೆಂಬರ್‌ 10 ರಂದು ಗಣೇಶ ಚತುರ್ಥಿ ದಿನದ ಶುಭ ಸಂದರ್ಭದಲ್ಲಿ 2017- 18 ಮತ್ತು 2018-19ನೇ ಬ್ಯಾಚ್‌ಗಳಿಗಾಗಿ ಘಟಿಕೋತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು.

ಮೂದಲ ಘಟಿಕೋತ್ಸವದಲ್ಲಿ ಮೂವರು ಪ್ರಖ್ಯಾತ ಶಿಕ್ಷಣ ತಜ್ಞರಿಗೆ ಮತ್ತು  ವಿಜ್ಞಾನಿಗಳಿಗೆ ಗೌರವಿಸಿ, ಎರಡನೇ ಘಟಕೋತ್ಸವದಲ್ಲೂ ಮೂವರು ಪ್ರಖ್ಯಾತ ಶಿಕ್ಷಣ ತಜ್ಞರಿಗೆ ಮತ್ತು ಜ್ಞಾನಿಗಳಿಗೆ ಗೌರವ ಡಾಕ್ಟರೇಟ್‌ ನೀಡಲು ವಿಶ್ವ ವಿದ್ಯಾಲಯ ನಿರ್ಧರಿಸಿದ್ದು, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಮತ್ತು ನ್ಯಾಯಶಾಸ್ತ್ರಜ್ಜರಾದ ಶಿವರಾಜ್‌ ಪಾಟೀಲ್‌. ಪ್ರಖ್ಯಾತ ಶಿಕ್ಷಣತಜ್ಞ. ಮತ್ತು ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸ೦ಸದ. ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಬಸವರಾಜ ಪಾಟೀಲ್‌ ಅವರಿಗೆ ಗೌರವಾನ್ವಿತ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಎರಡನೇ ಘಟಿಕೋತ್ಸವದಲ್ಲಿ ಖ್ಯಾತ ಶಿಕ್ಷಣ ತಜ್ಞ ಮತ್ತು ಕೈಗಾರಿಕೋದ್ಯಮಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್‌, ಧರ್ಮ ಮತ್ತು ಸಾಮಾಜಿಕ ಸೇವೆಯಲ್ಲಿ ನೀಡಿದ ಕೊಡುಗೆಗಾಗಿ ಕಲಬುರಗಿಯ ಚೌಡಾಪುರಿ ಹಿರೇಮಠದ ಪೂಜ್ಯ ಶ್ರೀ ಷ.ಬ್ರ.ರಾಜಶೇಖರ ಶಿವಾಚಾರ್ಯರು ಮತ್ತು ಖ್ಯಾತ ಉದ್ಯಮಿ ಲಿಂಗರಾಜ್‌ ಎಸ್‌ ಪಾಟೀಲ್‌ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು ಘಟಿಕೋತ್ಸವದಲ್ಲಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ ಡಾ. ಶಿವರಾಜ್  ಶಾಸ್ತ್ರೀ ಹೇರೂರ ಹಾಗೂ ಎರಡನೇ ಘಟಿಕೋತ್ಸವದಲ್ಲಿ ಕನ್ನಡ ಸಾಹಿತ್ಯ: ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ ಡಾ. ನೀಲಾಂಬಿಕಾ ಶೇರಿಕಾರ ಪೊಲೀಸ್‌ ಪಾಟೀಲ್‌ ಮತ್ತು ಡಾ.ಎಸ್‌.ಎಂ. ಹಿರೇಮಠ ಅವರ ಅನನ್ಯ ಕೊಡುಗೆಗಾಗಿ ಡಿ.ಲಿಟ್‌ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

2017-18ನೇ ಬ್ಯಾಚ್‌ನ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನ ಪಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 20 ಚಿನ್ನದ ಪದಕಗಳನ್ನು ನೀಡಲಾಗುವುದು. ಮೊದಲ ಘಟಿಕೋತ್ಸವದಲ್ಲಿ 352 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಗುವುದು.

2018-19ನೇ ಬ್ಯಾಚ್‌ನ 22 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಗುವುದು ದತ್ತು 327 ಸ್ನಾತಕೋತ್ತರ
ವಿದ್ಯಾರ್ಥಿಗಳಿಗೆ ಎರಡನೇ ಘಟಿಕೋತ್ಸವದಲ್ಲಿ ಪದವಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಟಾಯಿಣಿ ಅವ್ವಾ, ಚಿರಂಜೀವಿ ದೊಡ್ಡಪ್ಪ ಅಪ್ಪ, ವಿವಿಯ ಕುಲಪತಿ ಡಾ. ನಿರಂಜನ್ ನಿಷ್ಠಿ, ಬಸವರಾಜ್ ಎಸ್ ದೇಶಮುಖ, ಡಾ. ಅನಿಲ್ ಕುಮಾರ್ ಬಿಡಬೆ, ಡಾ. ಲಕ್ಮೀ ಪಾಟೀಲ್ ಮಾಕಾ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here