ಶ್ರಾವಣ ಮುಕ್ತಾಯ ನಿಮಿತ್ತ ರೈತರು ಪತ್ರಕರ್ತರಿಗೆ ಸನ್ಮಾನ

0
42

ಕಲಬುರಗಿ: ಭೂಸಣಗಿಯಲ್ಲಿ ಪತ್ರಕರ್ತರಿಗೆ,ಪ್ರಗತಿಪರ ರೈತರಿಗೆ ಮಹಾಗಾಂವ ಕಳ್ಳಿಮಠದ ಶ್ರೀಗಳಿಂದ ಸನ್ಮಾನ ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ ಕಳ್ಳಿಮಠದಲ್ಲಿ ಹಮ್ಮಿಕೊಂಡ ಶ್ರಾವಣ ಮುಕ್ತಾಯ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಹಾಗೂ ಪತ್ರಕರ್ತರನ್ನು ಮಹಾಗಾಂವ ಕಳ್ಳಿಮಠದ ಪೂಜ್ಯ ಗುರುಲಿಂಗ ಶಿವಾಚಾರ್ಯರು ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಖ್ಯಾತ  ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ನ್ಯಾಯವಾದಿ ಎಂ.ಸಿ.ಕೋರಿಶೆಟ್ಟಿ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ, ನಿವೃತ್ತ  ಪ್ರಾಧ್ಯಾಪಕ ಡಾ.ಕೆ.ಎಸ್.ಬಂಧು, ಚಿಂತಕ ಹಾಗೂ ಬಿಜೆಪಿ ಯುವ ಮುಖಂಡ ಪ್ರೊ. ಯಶವಂತರಾಯ್ ಅಷ್ಟಗಿ, ಸಿ.ಎಸ್ ಪಾಟೀಲ್, ಸುರೇಶ್ ಲೇಂಗಟಿ,ಬಿಜೆಪಿ ಮುಖಂಡ  ಜಗದೀಶ ಪಾಟೀಲ ಸಣ್ಣೂರ,ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ ಇದ್ದರು.

Contact Your\'s Advertisement; 9902492681

ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ನಂದಾ ದೀಪಗಳು: ಮಹಾಗಾಂವ ಕಳ್ಳಿಮಠದ ಪೂಜ್ಯ ಗುರುಲಿಂಗ ಶಿವಾಚಾರ್ಯರ ಅಭಿಮತ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗುರು ಹಿರಿಯರ, ತಂದೆ ತಾಯಿಯರ ಮೇಲಿನ ಗೌರವಾದಾರಗಳು ಕ್ಷೀಣಿಸುತ್ತಿವೆ, ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರ ರಹಿತವಾದ ಜೀವನವೇ ಇದಕ್ಕೆ ಮುಖ್ಯ ಕಾರಣ, ಪ್ರಸಕ್ತ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಅಂಧಃಪತನವಾಗುತ್ತಿರುವುದು ವಿಷಾದನೀಯ, ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು, ಏಕೆಂದರೆ ಇವು ಬಾಳಿನ ನಂದಾ ದೀಪಗಳು ಎಂದು ಮಹಾಗಾಂವ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ನುಡಿದರು.

ತಾಲೂಕಿನ ಭೂಸುಣಗಿ ಗ್ರಾಮದ ಕಳ್ಳಿಮಠದಲ್ಲಿ ಲಿಂ.ಚನ್ನಬಸವ ಶಿವಾಚಾರ್ಯರ ಸ್ಮರಣಾರ್ಥ ಹಮ್ಮಿಕೊಂಡ ಶ್ರಾವಣ ಮಾಸದ ಮುಕ್ತಾಯ, ಪ್ರಗತಿಪರ ರೈತರಿಗೆ ಸನ್ಮಾನ, ಪತ್ರಕರ್ತ ಸುರೇಶ್ ಲೇಂಗಟಿ ಅವರಿಗೆ ಸತ್ಕಾರ ಹಾಗೂ ಖಾಂಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಧರ್ಮ ಸಮಾಜವನ್ನು ಜೋಡಿಸುತ್ತದೆ,ಜಾತಿ ಸಮಾಜವನ್ನು ಒಡೆಯುತ್ತಿದೆ, ಆದ್ದರಿಂದ ಎಲ್ಲರೂ ಧರ್ಮದ ಮಾರ್ಗದಲ್ಲಿ ಸಾಗಬೇಕು ಎಂದರು.

ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅವರು ಮಾತನಾಡಿ ಮಾತು ಸಮಾಜದ ಸ್ವಾಮರಸ್ಯಕ್ಕಾಗಿ, ಐಕ್ಯತೆಗಾಗಿ, ಸ್ವಾಮರಸ್ಯ ಮತ್ತು ಸಹೋದರತ್ವ ಬೆಳೆಸಲು ಉಪಯೋಗವಾಗಬೇಕು ಆಗ ಮಾತ್ರ ಮಾತೆಂಬುದು ಜ್ಯೋತಿರ್ಲಿಂಗವಾಗುತ್ತದೆ ಎಂದರು.

ಕಮಲಾಪುರ ತಾಲೂಕಿನ ವ್ಯಾಪ್ತಿಯ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾದ  ಪತ್ರಕರ್ತ ಸುರೇಶ್ ಲೇಂಗಟಿ ಅವರನ್ನು ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ,  ನ್ಯಾಯವಾದಿ ಎಂ.ಸಿ.ಕೊರಿಶೆಟ್ಟಿ,   ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ, ಪ್ರೊ ಯಶವಂತರಾಯ್ ಅಷ್ಠಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎಸ್.ಪಾಟೀಲ್, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್.ಬಂಧು, ಪತ್ರಕರ್ತ ಸುರೇಶ್ ಲೇಂಗಟಿ, ಬಿಜೆಪಿ ಮುಖಂಡ ಜಗದೀಶ್ ಪಾಟೀಲ್ ಸಣ್ಣೂರ,  ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಶರಣು ಮಾಲಿ ಬಿರಾದಾರ, ಅರುಣಕುಮಾರ ಪಾಟೀಲ್, ಪ್ರಾಧ್ಯಾಪಕ ಶಿವಲಿಂಗಯ್ಯ ಕಳ್ಳಿಮಠ ಅವರು ಪ್ರಾಸ್ಥವಿಕವಾಗಿ ಮಾತನಾಡಿದರು, ಅನೀಲಕುಮಾರ ಕೋರೆ ಸ್ವಾಗತಿಸಿದರು, ಅಂಬಾರಾಯ ಮಡ್ಡೆ ನಿರೂಪಿಸಿದರು.

ಮಹಾಗಾಂನ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರ ಸಾಮಾಜಿಕ ಕಳಕಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರಗಳನ್ನು ನೀಡುತ್ತಿರುವುದು ಶ್ಲಾಘನೀಯ.-  ಪ್ರೊ.ಯಶವಂತರಾಯ್ ಅಷ್ಠಗಿ, ಚಿಂತಕರು ಹಾಗೂ ಬಿಜೆಪಿ ಯುವ ಮುಖಂಡರು, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here