ಆಳಂದ: ಹುಟ್ಟುಹಬ್ಬ ಆಚರಣೆಗಳು ಆಡಂಬರದಿಂದ ಕೂಡಿರದೆ ಸಾಮಾಜಿಕ ಹಿತದೃಷ್ಠಿಯಿಂದ ಕೂಡಿರಬೇಕು ಅಂದಾಗ ಮಾತ್ರ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ಸಾಮಾಜಿಕ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡರೆ ಹರಿಸಿದ ಹಾರೈಕೆಗಳು ವ್ಯಕ್ತಿಗೆ ತಲುಪುತ್ತವೆ ಅಂತ ವೈದ್ಯಾಧಿಕಾರಿ ಡಾ. ರಾಕೇಶ್ ಚವ್ಹಾಣ ಅಭಿಪ್ರಾಯ ಪಟ್ಟರು.
ತಾಲೂಕಿನ ನಿಂಬರ್ಗಾ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಖ್ಯಾತ ಉದ್ಯಮಿ ಸಂತೋಷ ಆರ್.ಗುತ್ತೆದಾರ ಅವರ 42 ನೇ ಜನ್ಮ ದಿನಾಚರಣೆ ಪ್ರಯುಕ್ತ ಕೋವಿಡ್-19 ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಆಡಂಬರದ ಹುಟ್ಟುಹಬ್ಬ ಆಚರಣೆ ಮೂಲಕ ಅನಗತ್ಯವಾಗಿ ಹಣ ಪೋಲು ಮಾಡುವದು ಕಂಡುಬರುತ್ತಿದೆ. ಅದೆ ಹಣ ಸಾಮಾಜಿಕ ಹಿತಕ್ಕೆ ಬಳಸಿದರೆ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿದಂತಾಗುತ್ತದೆ ಅಂತ ಹೇಳಿದರು.
ಇದೆ ಸಂದರ್ಭದಲ್ಲಿ ಪರಿಸರ ಸ್ವಚ್ವತೆ ಕಾಪಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಹೇಳಿದರು. ಸದ್ಯ ಮಳೆಗಾಲ ಇರುವದರಿಂದ ಸಾಂಕ್ರಾಮಿಕ ರೋಗಗಳ ಆತಂಕ ಹೆಚ್ಚಿರುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತೆ ಬಗ್ಗೆ ಎಲ್ಲರು ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಮಲ್ಲಿನಾಥ ಒಡೆಯರ್, ಮಹಾಮಾರಿ ಕೊರೊನಾದಿಂದ ಜನರು ಸಂಕಷ್ಟಕ್ಕಿಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತೋಷ ಆರ್. ಗುತ್ತೆದಾರ ಅವರ ಜನ್ಮ ದಿನಾಚರಣೆ ಪ್ರಯುಕ್ತ ಜನರ ಆರೋಗ್ಯದ ಹಿತದೃಷ್ಟಿಯಿಂದ ಲಸಿಕಾ ವಿತರಣೆ ಕಾರ್ಯಕ್ರಮ ಆಯೋಜಿಸಿರುವ ಬಿಜೆಪಿಯ ಹಿರಿಯ ಮುಖಂಡ ಮಹಿಬೂಬ ಪಟೇಲ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದು ಹರ್ಷ ವ್ಯಕ್ತ ಪಡಿಸಿದರು.
ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬಿರಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ನಮ್ಮ ಮಕ್ಕಳನ್ನು ಎಚ್ಚರದಿಂದ ನೋಡಿಕೊಳ್ಳಬೇಕು. ಪೌಷ್ಠಿಕ ಆಹಾರ ನೀಡುವ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಗೆ ಪೊಷಕರು ಮುಂದಾಗಬೇಕು. ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಬೇಕು. ಹಣ್ಣು ಹಂಪಲು ಕಾಳು ಹಸಿ ತರಕಾರಿ ಸೇವಿಸಬೇಕು ಅಂತ ಗ್ರಾಮಸ್ಥರಿಗೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಮಹಿಬೂಬ ಪಟೇಲ ಸಲಹೆ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು. ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರ ಮತ್ತು ಧಂಗಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಜನ ಗ್ರಾಮಸ್ಥರು ಕೋವಿಡ್ ಲಸಿಕೆ ಪಡೆದರು.
ಈ ಸಂಧರ್ಭದಲ್ಲಿ ಮಾಜಿ ತಾ.ಪಂ ಸದಸ್ಯರಾದ ದತ್ತಾತ್ರೇಯ ದುರ್ಗದ, ಗ್ರಾ.ಪಂ ಮಾಜಿ ಅಧ್ಯಕ್ಷ ಅಮೃತ ಬಿಬ್ರಾಣಿ, ಶ್ರೀಶೈಲ ಮಾಲಿಪಾಟೀಲ, ಮಲ್ಲಿನಾಥ ನಾಗಶೇಟಿ, ವಿಶ್ವನಾಥ ಪಾಟೀಲ್, ದತ್ತಪ್ಪಾ ಬಿದನಕರ್, ರೇವಣಸಿದ್ದಾ ನಡಗಡ್ಡಿ, ಮಲ್ಲಿನಾಥ ನಾಗಶೇಟಿ, ಭಾಗಪ್ಪಾ ಸಿಂಗೆ, ಲಕ್ಮೀಕಾಂತ ದುಗೊಂಡ, ವಿಜಯಕುಮಾರ ಚಿಂಚೋಳಿ, ರಾಜಕುಮಾರ ಸಿಂಗೆ, ಶರಣಪ್ಪಾ ಹುಗೊಂಡ, ಅಶೋಕ ಚವ್ಹಾಣ ಇನ್ನಿತರರು ಇದ್ದರು. ನಿರೂಪಣೆ ಶಾಂತಕುಮಾರ ಯಳಸಂಗಿ, ಸ್ವಾಗತ ಬಸವರಾಜ ಯಳಸಂಗಿ ಹಾಗೂ ವಂದನಾರ್ಪಣೆಯನ್ನು ಭಾಗಪ್ಪಾ ಸಿಂಗೆ ನಡೆಸಿಕೊಟ್ಟರು.