ಪ್ರತ್ಯೇಕ ರಾಜ್ಯಕ್ಕೆ ಹಕ್ಕೊತ್ತಾಯ

0
16

ಕಲಬುರಗಿ: ಕಲ್ಯಾಣ ಕರ್ನಾಟಕ ಹಾಗೂ ಕಲಬುರಗಿ ಜಿಲ್ಲೆಯ ಬಗ್ಗೆ ಕೇಂದ್ರ ರಾಜ್ಯ ಸರಕಾರಗಳು ಮಲತಾಯಿ ಧೋರಣೆ ತೋರುತ್ತಿವೆ. ಹೀಗಾಗಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ರಚನೆಗೆ ಹಕ್ಕೊತ್ತಾಯ ಮಾಡುವದು ಅನಿವಾರ್ಯ ಎಂದು ಕಲ್ಯಾಣನಾಡು ವಿಕಾಸ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿ ಭಟನಾ ಪ್ರದರ್ಶನ ನಡೆಸಿ ಮನವಿ ಸಲ್ಲಿಸಲಾಯಿತು.

ಡಾ.ಡಿಎಂ ನಂಜುಂಡಪ್ಪ ಅವರ ವರದಿ ಪ್ರಕಾರ ಈ ಭಾಗಕ್ಕೆ ಬರ ಬೇಕಿದ್ದ ಯೋಜನೆಗಳು ಬಾರದೇ ಕೈತಪ್ಪಿ ಹೋಗಿವೆ. ೩೭೧(ಜೆ) ಕಲಂ ಸಹ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ಪ್ರತಿ ಭಟನಾಕಾರರುದೂರಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಮುತ್ತಣ್ಣ ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ್, ಅನೀಲ ಕಪನೂರ, ಗೌತಮ ಕರಿಕಲ್, ಸಾಗರ ಪಾಟೀಲ, ಸಿದ್ಧಲಿಂಗ ಉಪ್ಪಾರ, ನಾಗು ಡೊಂಗರಗಾಂವ್, ಮಹೇಶ ಪಾಟೀಲ, ಸೂರ್ಯಪ್ರಕಾಶ ಚಾಳಿ, ದೇವು ದೊರೆ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here