ಕಲಬುರಗಿ: ನಕಲಿ ಬೀಜ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು ನಕಲಿ ಬೀಜ ಮಾರಾಟಗಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ರೈತ ಮುಖಂಡ ಸಿದ್ದಪ್ಪ ಪೂಜಾರಿ ಹೇಳಿದರು.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು ನಕಲಿ ಬೀಜ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಕಿಳ್ಳಿ ಅವರು ಮಾತನಾಡಿ ರೈತರಿಗೆ ನಕಲಿ ಬೀಜ ಮಾರಾಟ ಮಾಡಿ ಮೋಸ ಮಾಡಿದ ದೀಪಕ ಗಿಲ್ಡಾ ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.
ಕಲಬುರಗಿ ಗ್ರಾಮೀಣ ಯುವ ಕಾಂಗ್ರೆಸ್ ಸಂಯೋಜಕರಾದ ಶಿವಾನಂದ ಆರ್ ಕಿಳ್ಳಿ ಅವರು ಮಾತನಾಡಿ ಹಾನಿಗೊಳಗಾದ ಪ್ರತಿ ರೈತರಿಗೆ ಎಕರೆಗೆ ೨೦ ಸಾವಿರ ಪರಿಹಾರ ನೀಡಬೇಕು ಹಾಗೂ ಉದ್ಯಮಿ ದೀಪಕ್ ಗಿಲ್ಡಾ ಕಂಪನಿಯ ಪರವಾನಿಗೆ ರದ್ದುಗೊಳಿಸಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವ ಮುಖಂಡರಾದ ರಮೇಶ್ ಮೀಸಿ ಮಲ್ಲಿಕಾರ್ಜುನ ಶ್ರೀಗನ್ ಲಕ್ಷ್ಮಣ ಪೂಜಾರಿ ಶರಣಪ್ಪ ವಗ್ಯಾ ಉಪಸ್ಥಿತರಿದ್ದರು.