ರೈತರು ರೈತ ವಿದ್ಯಾ ನಿಧಿ ಯೋಜನೆಯ ಲಾಭ ಪಡೆಯಿರಿ: ಮಾನಕರ್

0
46

ಶಹಾಬಾದ: ಸರ್ಕಾರ ರೈತರ ಮಕ್ಕಳಿಗೆ ಶಿ? ವೇತನ ನೀಡುವ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆ ಉದ್ಘಾಟನೆ ಮಾಡಲಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದ್ದು ಅದರ ಸಂಪೂರ್ಣ ಮಾಹಿತಿ ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಚಿತ್ತಾಪೂರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್ ಹೇಳಿದರು.

ಅವರು ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಯ ಕುರಿತು ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ರೈತರ ಮಕ್ಕಳು ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಸ್ಕಾಲರ್‌ಶಿಪ್ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ, ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿರುವ ವ್ಯಕ್ತಿಯನ್ನು ರೈತ ಎಂದು ಪರಿಗಣಿಸಲಾಗುವುದು. ಅವರು ಕಾನೂನು ಪ್ರಕಾರ ದತ್ತು ಪಡೆದಿರುವ ಮಕ್ಕಳು ಸೇರಿದಂತೆ ಸಂಬಂಧಪಟ್ಟರೈತರ ಮಕ್ಕಳು ಅರ್ಹರು. ಯಾವುದೇ ಮಕ್ಕಳಿಗೆ ಪೋ?ಕರು ಇಲ್ಲದಿದ್ದರೆ ತಮ್ಮ ಹೆಸರಿನಲ್ಲೆ ಜಮೀನು ಹೊಂದಿರಬೇಕು ಎಂದು ಹೇಳಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಾಶಿನಾಥ ದಂಡೋತಿ, ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಅರ್ಹರಿರುತ್ತಾರೆ. ಆದಾಗ್ಯೂ ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ‍್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ವಿದ್ಯಾರ್ಥಿವೇತನ, ಪ್ರಶಸ್ತಿ ಹಣಗಳನ್ನು (ರಿವಾರ್ಡ್) ರೈತರ ಮಕ್ಕಳು ಪಡೆದಿದ್ದರೂ ಈ ವಿದ್ಯಾರ್ಥಿವೇತನ ಪಡೆಯಲೂ ಅರ್ಹರಿರುತ್ತಾರೆ. ಶಿಷ್ಯ ವೇತನವು ಶಿಕ್ಷಣದ ಯಾವುದೇ ಕೋರ್ಸ್‌ನ ಸೆಮಿಸ್ಟರ್, ಶೈಕ್ಷಣಿಕ ವ?ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಒಂದು ಸೆಮಿಸ್ಟರ್‌ನಲ್ಲಿ ಫೇಲ್ ಆಗಿ ಮತ್ತೆ ಪುನರಾವರ್ತನೆಯಾಗುವ ಸಮಯದಲ್ಲಿ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ವಿದ್ಯಾರ್ಥಿ ವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್‌ಗೆ ಮಾತ್ರ ನೀಡಲಾಗುವುದು. ಆದ್ದರಿಂದ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಹೇಳಿದರು.

ಕೃಷಿ ಅಧಿಕಾರಿ ಶಶಿಕಾಂತ ಭರಣಿ, ಸಕಾಯಕ ಕೃಷಿ ಅಧಿಕಾರಿ ರವೀಂದ್ರಕುಮಾರ ಸೇರಿದಂತೆ ರೈತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here