ಕಲಬುರಗಿ: ಇಂದು, ಬೆಳ್ಳೆಗ್ಗೆ 8.45 ಗಂಟೆಗೆ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಹಳೆ ಬ್ರಹ್ಮಪೂರ್ ಬಡಾವಣೆಯ ಚಂದ್ರಶೇಖರ್ ಅಜಾದ್ ಚೌಕನಲ್ಲಿ, 73 ನೇ ವಿಮೋಚನಾ ದಿನಾಚರಣೆ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಕವಿರಾಜ್ ಕೋರಿ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ನಾವು ಸರ್ಕಾರದ ಆದೇಶ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆದರೆ ನಮ್ಮ ಸಂಘದ ಗೌರವ ಅಧ್ಯಕ್ಷರು ಹಾಗೂ ನ್ಯಾಯವಾದಿ ಹೋರಾಟಗಾರ ಜೇನವೆರಿ ವಿನೋದ ಕುಮಾರ ರವರು ತಮ್ಮ ಹಟ ಬಿಡದೆ ಕಳೆದ 7 ವರ್ಷಗಳಿಂದ ಸೆಪ್ಟೆಂಬರ್18 ರಂದು ಆಚರಿಸುತ್ತಾರೆ. ನಮ್ಮ ಕ.ಕ ನೈಜ ಸ್ವಾತಂತ್ರ್ಯವನ್ನು ಆಚರಿಸಬೇಕು ಎನ್ನುವ ಮನವಿ ಸರ್ಕಾರ ಪರಿಗಣಿಸಿ ಆ ಭಾಗಕ್ಕೆ ನ್ಯಾಯ ಒದಗಿಸಲು ನಾವೆಲ್ಲರೂ ಒಂದು ಗೂಡಿ ಧ್ವನಿ ಮುಟ್ಟಿಸಬೇಕಾಗಿದೆ ಎಂದು ಕೋರಿದರು.
ಮೊದಲಿಗೆ, ಸರದಾರ ವಲ್ಲಭಭಾಯಿ ಪಟೇಲ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಚಿಕ್ಕ ಮಕ್ಕಳ ಕೈಯಿಂದ ಧ್ವಜಾರೋಹಣ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಬಡಾವಣೆಯ ತಿಪ್ಪಣ್ಣ ಬಾಲಿಕಾಯಿ, ಬಾಬು ಪಡಶೆಟ್ಟಿ, ಬಸವರಾಜ ಗೌಡ ಚಿತ್ತಾಪುರ, ತಾರಾ ಸಿಂಗ್, ಫೋಟೋ ಶರಣಯ್ಯ ಸ್ವಾಮಿ, ಅಮೃತ, ಟೈಲರ್ ಅಂಬರೀಷ್ ಜಮದಾರ ಹಾಗೂ ದತ್ತಾತ್ರೇಯ ರೆಡ್ಡಿ ಇತರರು ಉಪಸ್ಥಿತರಿದ್ದರು.