ಪೌಷ್ಟಿಕ ಕೈತೋಟ, ಸಸಿ ನೆಡುವ ತರಬೇತಿ

0
20

ಕಲಬುರಗಿ: ಕೇಂದ್ರ ಕೃಷಿ ಮಂತ್ರಾಲಯ, ಇಪ್ಕೋ ಸಂಸ್ಥೆ, ಧಾನ್ ಪೌಂಡೇಷನ್, ವಿ.ಜಿ. ಉಮ್ಯಾನ್ಸ್ ಮಹಾವಿಧ್ಯಾಲಯ, ಶ್ರೀ ಶರಣಬಸವ ವಿಶ್ವ ವಿದ್ಯಾಲಯ, ಮತು ಕೆವಿಕೆ, ಕಲಬುರಗಿಇವರ ಸಹಯೋಗದೊಂದಿಗೆ ನಗರದ ಆಳಂದ ರಸ್ತೆಯಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಕೃಷಿ ಮಹಾವಿದ್ಯಾಲಯಡೀನ್(ಕೃಷಿ)ರಾದ ಡಾ. ಸುರೇಶ ಪಾಟೀಲ್‌ರವರುಕೃಷಿಯಲ್ಲಿ ಮಹಿಳೆಯ ಪಾತ್ರಅಗತ್ಯವಾಗಿದ್ದು, ಪೌಷ್ಟಿಕ ಆಹಾರವನ್ನು ಕೃಷಿ ಕುಟುಂಬಗಳು ಸೇವಿಸಲು ಎಲ್ಲರಿಗೂ ಪ್ರೇರೆಪಿಸಬೇಕೆಂದರು.

Contact Your\'s Advertisement; 9902492681

ವಲಯ ಕೃಷಿ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಂ.ಎಂ. ಧನೋಜಿರವರು ಮಾತನಾಡಿ ಸಮತೋಲನಾ ಆಹಾರ ಇಂದಿನ ಅಗತ್ಯತೆಗ್ರಾಮೀಣ ಭಾಗದ ಹಿಂದಿನ ಆಹಾರ ಪದ್ದತಿಆರೋಗ್ಯ ಮತ್ತು ಆಯುಷ್ಯ ಹಾಗೂ ರೋಗ ನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗಲು ಉತ್ತೇಜನಕಾರಿಯಾಗಿದ್ದುಎಂದು ತಿಳಿಸಿದರು.

ಸಸ್ಯಜೀವಶಾಸ್ತ್ರ ವಿಭಾಗದಉಪನ್ಯಾಸಕರಾದಡಾ.ದ್ವಾರಕಜಾದವರವರು ಮಾತನಾಡಿ ಪ್ರಸ್ತುತ ಇಂದಿನ ದಿನಗಳಲ್ಲಿ ಆಹಾರ ಕಲಬೆರಕೆಯಾಗುತ್ತಿದ್ದು, ಆರೋಗ್ಯಕೆಡದಂತೆ ಮಹಿಳೆಯರು ಅಡುಗೆ ಮನೆಯಿಂದಲೇ ಸುಚಿತ್ವ ಹಾಗೂ ಪೌಷ್ಟಿಕ ಆಹಾರ ಮತ್ತುಅದರದೈನಂದಿನ ಬಳಕೆಯಾಗುವಂತೆ ಯೋಜನೆರೂಪಿಸಬೇಕೆಂದು ತಿಳಿಸಿದರು.

ಐಸಿಎಆರ್-ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥರಾದಡಾ.ರಾಜು ಜಿ. ತೆಗ್ಗಳ್ಳಿ ರವರು ಪ್ರಾಸ್ತಾವಿಕವಾಗಿ ಮಾತನಾಡಿಅಪೋಷ್ಟಿಕತೆಗೆ ಕಾರಣಗಳು ಅರಿತು ಮನೆಯಲ್ಲೇ ಪೌಷ್ಟಿಕ ಕೈ ತೋಟರಚಿಸಬೇಕೆಂದು ಸಲಹೆ ನೀಡಿದರು.  ಕೆವಿಕೆ ವಿಜ್ಞಾನಿಗಳಾದ ಡಾ.ವಾಸುದೇವ ನಾಯಕ್, ತೋಟಗಾರಿಕೆಯ ಮಹತ್ವ ಹಾಗೂ ಪೌಷ್ಟಿಕ ಕೈ ತೋಟದ ಮಾಹಿತಿ ನೀಡಿದರು. ಡಾ. ಯುಸುಫ್‌ಅಲಿ ನಿಂಬರಗಿ, ಪೌಷ್ಟಿಕ ಸಿರಿಧಾನ್ಯ ಹಾಗೂ ಏಕದಳ ಬೆಳೆಗಳ ಮಾಹಿತಿಯನ್ನು ತಿಳಿಸಿದರು.

ಕೆವಿಕೆಯ ಸಸ್ಯರೋಗತಜ್ಞರಾದಡಾ.ಜಹೀರ್‌ಅಹೆಮದ್‌ರವರುಕಾರ್ಯಕ್ರಮವನ್ನು ನಿರೂಪಿಸಿದರು. ಇಪ್ಕೋ ಸಂಸ್ಥೆಯಕ್ಷೇತ್ರ ಅಧಿಕಾರಿಗಳಾದ ಸೌರವ ಬಿ.ಆರ್, ಧಾನ್ ಪೌಂಡೇಷನ್‌ನ ಕಲಬುರಗಿಯ ವಿಭಾಗದ ಅಧಿಕಾರಿ ವಿರೇಂದ್ರ ಹಾಗೂ ಡಾ.ಅರ್ಜುನಶೆಟ್ಟಿಉಪನ್ಯಾಸಕರು, ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ, ವಿದ್ಯಾರ್ಥಿಗಳು ಹಾಗೂ ರೈತ ಮಹಿಳೆಯರು ಭಾಗವಹಿಸಿದರು. ಹಣ್ಣಿನ ಸಸಿಗಳ ವಿತರಣೆ ಮತ್ತು ಸಸಿ ನೆಡುವಕಾರ್ಯಕ್ರಮ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here