ಚಿತ್ತಾಪುರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತ್ತು.
ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಶಿಲ್ಪಗಳ ಭಂಡಾರವೇ ವಿಶ್ವಕರ್ಮ. ಮೂರು ಯುಗದಲ್ಲಿ ಅವತಾರಪುರುಷರು ಆಗಿದ್ದರು.ಕೋವಿಡ್ ನಿಯಮದ ಪ್ರಕಾರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಕೃಷ್ಣಾಪ್ಪ ಕಲ್ಲದೇವರ,ಗ್ರೇಟ್-2 ತಹಶೀಲ್ದಾರ್ ರವೀಂದ್ರ ಧಾಮಾ,ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನಿಲಗಂಗಾ ಬಬಲಾದ್,ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಲವಡಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ,ತಾ.ಪಂ.ಮಾಜಿ ಅಧ್ಯಕ್ಷ ಜಗಣ್ಣಗೌಡ ಪಾಟೀಲ್ ರಾಮತೀರ್ಥ,ರೇವಣ್ಣಸಿದ್ದಪ್ಪಾ ರೋಣದ್,ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪ್ರಹ್ಲಾದ ವಿಶ್ವಕರ್ಮ ಯರಗಲ್, ಗೌರವ ಅಧ್ಯಕ್ಷ ಕಾಶಿಪತಿ ವಿಶ್ವಕರ್ಮ, ಪ್ರದಾನ ಕಾರ್ಯದರ್ಶಿ ಮೊನಯ್ಯ ಪಂಚಾಳ, ಖಜಾಂಜಿ ವಿರಣ್ಣಾ ಶಿಲ್ಪಿ, ಸಹ ಕಾರ್ಯದರ್ಶಿ ಪ್ರಕಾಶ ವಿಶ್ವಕರ್ಮ, ಅಖಂಡೇಶ್ವರ ವಿಶ್ವಕರ್ಮ ಮಂದಿರ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಭಕ್ತಿ ಸುರೇಶ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ವಿಶ್ವಕರ್ಮ ಸಮಾಜ ಬಾಂಧವರು ಇದ್ದರು.