ತಳವಾರ ಜನಾಂಗಕ್ಕೆ ಪರಿಶಿಷ್ಟ ಪಂಗಡ ಪತ್ರ ವಿತರಣೆಗೆ ಒತ್ತಾಯಿಸಿ ಸಿಎಂಗೆ ಮನವಿ

0
55

ಕಲಬುರಗಿ: ಕೇಂದ್ರ ಸರಕಾರದ 19-03-2020ರ ಆದೇಶದಂತೆ ತಳವಾರ ಸಮುದಾಯದ ಜನಾಂಗಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ತಳವಾರ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸರ್ದಾರ ರಾಯಪ್ಪ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

19-03-2020ರಂದು ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದು ರಾಷ್ಟ್ರಪತಿಯವರ ಅಂಕಿತದೊಂದಿಗೆ ಸಿಧ್ಧಿ, ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ರಾಜ್ಯಪತ್ರ ಹೊರಡಿಸಿದೆ. ಅದರಂತೆ ರಾಜ್ಯ ಸರಕಾರವು ಕೂಡ ಕೇಂದ್ರ ಸರ್ಕಾರದ ಆದೇಶವನ್ನು ಪರಿಗಣಿಸಿ 08-05-2020ರಂದು ರಾಜ್ಯಪತ್ರ ಹೊರಡಿಸಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಿತ್ತು.

Contact Your\'s Advertisement; 9902492681

ಆದರೆ ಪ್ರಬಲ ಸಮುದಾಯದವರ ಒತ್ತಡ, ರಾಜಕೀಯ ಮೇಲಾಟದಿಂದ ತಳವಾರ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿತು. ಹಾಗೆಯೇ ‘ಇದು ನಿಮಗೆ ಸಂಬಂಧಿಸಿದ್ದಲ್ಲ ಕೇಂದ್ರ ಸರಕಾರಕ್ಕೆ ಕ್ಲಾರಿಫಿಕೇಶನ್ ಕೇಳುತ್ತೇವೆ, ಎಂದು ಸರ್ಕಾರ ನಮ್ಮ ಭವಿಷ್ಯದ ಜೀವನ ನರಕಕ್ಕೆ ನೂಕಿತು. ಈಗ ಅಧಿಕಾರಿಗಳು ದಿನನಿತ್ಯ ನಮಗೆ ಚಿತ್ರಹಿಂಸೆ ಕೊಡುಟ್ಟು ಸಿಕ್ಷಿಸುದ್ದಾರೆ ಎಂದು ತಮ್ಮ ಅಳಲು ತೊಡಿಕೊಂಡರು.

ರಾಜ್ಯ ಸರಕಾರದ ನಡೆಯಿಂದ ನಮಗಾದ ಅನ್ಯಾಯವನ್ನು ಖಂಡಿಸಿ ಹೋರಾಟ ಆರಂಭವಾದ ದಿನದಿಂದ ಪ್ರಸ್ತುತ ವರೆಗೂ ಹೇಳುತ್ತೇವೆ ತಳವಾರ ಒಂದು ಸ್ವತಂತ್ರ ಪದ, ಅದು ಯಾವ ಸಮುದಾಯ, ಜಾತಿಗೂ ಸಂಬಂಧಿಸಿದ್ದಲ್ಲವೆಂದು, ನಮ್ಮ ವಾದದ ಪ್ರತಿ ಧ್ವನಿಯಂತೆ ಕೇಂದ್ರ ಸರಕಾರವು ಕೂಡ ಧ್ವನಿಯತ್ತಿದೆ, ಈಗಲಾದರೂ ಕೂಡ ಸರಿಯಾದ ಸ್ಪಷ್ಟೀಕರಣ ಕೊಟ್ಟು ತಳಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಸರಕಾರ ಸೂಕ್ತವಾಗಿ ಸ್ಪಂದಿಸಿದ್ದರೆ, ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಅದಕ್ಕೆ ಸರ್ಕಾರವೆ ನೇರ ಹೊಣೆ ಹೊಣೆಯಾಗಬೇಕಾತ್ತದೆ ಎಂದು ಸರಕಾರಕ್ಕೆ ಮನವಿ ಪತ್ರ ನೀಡುವ ಮೂಲಕ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕೊತ್ಲಪ್ಪ ಮುತ್ಯಾ ತೊನಸನಹಳ್ಳಿ, ರವಿ ಶ್ಯಾಬಾದ, ಬೆಳ್ಳೆಪ್ಪ ಖಣದಾಳ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here