ತಾಲೂಕು ಆಸ್ಪತ್ರೆಗೆ ಶಾಸಕ ರಾಜುಗೌಡ ಭೇಟಿ ರೋಗಿಗಳ ಆರೋಗ್ಯ ವಿಚಾರಣೆ

0
22

ಸುರಪುರ: ಕಳೆದ ಮೂರು ದಿನಗಳಿಂದ ವಾಂತಿ ಭೇದಿಯಿಂದ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ತಾಲೂಕಿನ ಮಾಚಗುಂಡಾಳ ಗ್ರಾಮದ ರೋಗಿಗಳಿಗೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷರು ಹಾಗು ಶಾಸಕ ರಾಜುಗೌಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಆಸ್ಪತ್ರೆಯಲ್ಲಿನ ಎಲ್ಲಾ ಕೋಣೆಗಳಲ್ಲಿ ದಾಖಲಾಗಿರುವ ೩೮ ಜನ ರೋಗಿಗಳನ್ನು ಪ್ರತಿಯೊಬ್ಬರನ್ನು ಭೇಟಿ ಮಾಡಿ ಆರೋಗ್ಯದ ಕುರಿತು ವಿಚಾರಿಸಿದರು, ಅಲ್ಲದೆ ಯಾವುದೇ ಕಾರಣಕ್ಕೂ ಧೈರ್ಯ ಬಿಡಬೇಡಿ ಆದಷ್ಟು ಬೇಗನೆ ಗುಣಮುಖರಾಗಲಿದ್ದೀರಿ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ಎಲ್ಲರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಿ ಮತ್ತು ಆದಷ್ಟು ಬೇಗನೆ ಎಲ್ಲರು ಗುಣಮುಖರಾಗುವಂತೆ ನೋಡಿಕೊಳ್ಳಲು ತಿಳಿಸಿದರು.ಅಲ್ಲದೆ ಎಲ್ಲರ ಆರೋಗ್ಯ ಸುಧಾರಣೆಗೆ ಬೇಕಾದ ಎಲ್ಲಾ ರೀತಿಯ ಚಿಕಿತ್ಸೆಗೆ ನೆರವನ್ನು ನೀಡುವುದಾಗಿ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹಾಜರಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ಕಳೆದ ಮೂರು ದಿನಗಳಿಂದ ಎಲ್ಲರಿಗೂ ಹಗಲಿರಳು ಗಮನಿಸಲಾಗುತ್ತಿದ್ದು,ಬಹುತೇಕರ ಆರೋಗ್ಯ ಸುಧಾರಿಸಿದೆ ಎಂದು ವಿವರಣೆ ನೀಡಿದರು. ನಂತರ ಮಾಚಗುಂಡಾಳ ಗ್ರಾಮ್ಕಕೆ ತೆರಳಿದ ಶಾಸಕರು ಮಾಚಗುಂಡಾಳ ಗ್ರಾಮದಲ್ಲಿ ನೀರು ಸರಬರಾಜು ಮಾಡುವ ಟ್ಯಾಂಕರ್ ಮತ್ತು ತೆರೆದ ಬಾವಿಯನ್ನು ಪರಿಶೀಲಿಸಿದರು ಅಲ್ಲದೆ ಟ್ಯಾಂಕರ್ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರಲ್ಲದೆ ಗ್ರಾಮದಲ್ಲಿ ಹೊಸದಾಗಿ ಬೋರವೆಲ್‌ಗಳನ್ನು ಹಾಕಲು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ತಾಲೂಕು ಪಂಚಾಯತಿ ಇಒ ಅಂಬ್ರೇಶ ಮೂಡಲದಿನ್ನಿ ಹಾಗು ಮುಖಂಡರಾದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್,ದೊಡ್ಡದೇಸಾಯಿ ದೇವರಗೋನಾಲ,ಬಲಭೀಮನಾಯಕ ಬೈರಿಮಡ್ಡಿ,ಶರಣು ನಾಯಕ ಬೈರಿಮಡ್ಡಿ,ಸಿದ್ದನಗೌಡ ಕರಿಬಾವಿ,ವೆಂಕಟೇಶ ನಾಯಕ ಬೈರಿಮಡ್ಡಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here