ಸದೃಢ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯ

0
79

ಕಲಬುರಗಿ: ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯಾಧ್ಯಕ್ಷ ಎಂ.ನಾಗಾರಜು ಅವರಿಗೆ ಭಾನುವಾರ ಹುಮನಾಬಾದ ತಾಲುಕಿನ ಧುಮ್ಮನಸುರ ಮಠದಲ್ಲಿ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಿಂದುಳಿದ ಅಲೆಮಾರಿ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಮತ್ತು ಅಲೆಮಾರಿ ಹಾಗೂ ಅರೆ-ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಜಾರಿಯಲ್ಲಿರುವ ಭೂಒಡೆತನ ಯೋಜನೆಯನ್ನು ಮುಂದುವರೆಸುವ ಬಗ್ಗೆ ಮತ್ತು ಅಲೆಮಾರಿ ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೋಳಿಸುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಮುಂಬರುವ ದಿನಗಳಲ್ಲಿ ಅಲೆಮಾರಿ ಹೆಳವ ಸಮುದಾಯದ ರಾಜ್ಯ ಮಟ್ಟದ ಸಮಾವೇಶವನ್ನು ಕಲ್ಯಾಣ ಕರ್ನಾಟಕದ ಭಾಗದ ಕಲಬುರಗಿಯಲ್ಲಿ ಮಾಡುವ ಕುರಿತು ರಾಜ್ಯಾಧ್ಯಕ್ಷರ ಜೋತೆ ಚರ್ಚಿಸಲಾಯಿತು.

Contact Your\'s Advertisement; 9902492681

ಸಭೆಯಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ, ಕಲಬುರಗಿ ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಆರ್. ಹೆಳವರ ಹೆಬ್ಬಾಳ, ಗುರಲಿಂಗ ಎಚ್. ಹೆಳವರ, ಶರಣಪ್ಪ ಹೆಳವರ ಕೇಲೂರ, ನಿಂಗಪ್ಪ ಹೆಳವರ ಬಾದಾಮಿ, ಸಂಗಮೇಶ ಹೆಳವರ, ರೇಣುಕಾ ಹೆಳವರ, ಲಕ್ಷ್ಮಣ ಹೆಳವರ ಮತ್ತು ಇನ್ನಿತರ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here