ಕಾಯಕಕ್ಕೆ ಉತ್ತಮ ನಿದರ್ಶನರೆಂದರೆ ಹೂಗಾರ ಮಾದಯ್ಯ

1
67

ಶಹಾಬಾದ: ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎನ್ನುವ ಮಾತಿಗೆ ಹೂಗಾರ ಮಾದಯ್ಯ ಉತ್ತಮ ನಿದರ್ಶನವಾಗಿದ್ದರು ಎಂದು ಹೂಗಾರ ಸಮಾಜದ ಅಧ್ಯಕ್ಷ ಕಾಶಿರಾಯ ಹೂಗಾರ ಹೇಳಿದರು.

ಅವರು ಸೋಮವಾರ ತಾಲೂಕಿನ ದೇವನತೆಗನೂರ ಗ್ರಾಮದಲ್ಲಿ ಆಯೋಜಿಸಲಾದ 12ನೇ ಶತಮಾನದ ಶಿವಶರಣ ಹೂಗಾರ ಮಾದಯ್ಯನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

12 ನೇ ಶತಮಾನದಲ್ಲಿ ಕ್ರಾಂತಿ ಕಾರ್ಯಕಗಳಿಗೆ ಶ್ರಮಿಸಿದ ಶರಣರೊಂದಿಗೆ ಹೂಗಾರ ಮಾದಣ್ಣನವರ ಸೇವೆ ಕೂಡ ಅಪಾರವಾಗಿದೆ. ಮನುಷ್ಯ ಹುಟ್ಟಿನಿಂದ ಸಾಯುವತನಕ ಹೂಗಾರನ ಸೇವೆ ಅವಶ್ಯವಾದದ್ದು.ಹೂವು ಇಲ್ಲದ ಕಾರ್ಯ ಯಾವುದು ಇಲ್ಲ.

ಹೂಗಾರ ನೀಡುವ ಹೂಗಳು ದೇವರ ಶಿರಕ್ಕೆ ರ್ಪಣೆಯಾದರೆ, ಗುರುವಿನ ಕಾಲಿಗೆ ಶೋಭೆ ನೀಡುತ್ತವೆ.ಅಲ್ಲದೇ ಮಹಿಳೆಯರಿಗೆ ಶೃಂಗಾರ ನೀಡುವ ಶಕ್ತಿ ಹೂವಿಗಿದೆ.ಶರಣರ ಪೂಜೆಗಳಿಗೆ ಹೂವುಗಳನ್ನು ಪೂರೈಸುತ್ತಾ ವನಚಗಳನ್ನು ರಚಿಸಿದ ಕೀರ್ತಿ ಮಾದಣ್ಣನವರಿಗಿದೆ ಎಂದು ಹೇಳಿದರು.

ಮರತೂರ ಗ್ರಾಪಂ ಸದಸ್ಯ ಶಿವಾನಂದ ಮಕಾಶಿ ಮಾತನಾಡಿ, ಹೂವಾಡಿಗ ಸಮುದಾಯದಲ್ಲಿ 28 ಉಪನಾಮಗಳಿವೆ. ಹೂಗಾರ ಸಮಾಜ ಚಿಕ್ಕದಲ್ಲ. ಎಲ್ಲ ಸಮುದಾಯಗಳಿಗಿಂತ ಉನ್ನತ ಸ್ಥಾನದಲ್ಲಿದೆ. ದೇವರ ತಲೆ ಮೇಲೆ ಕೈಯಿಟ್ಟು ಪೂಜೆ ಮಾಡುವ ಸಮುದಾಯ ನಮ್ಮದು. ಈ ಸಮಾಜ ದೊಡ್ಡ ಮನಸ್ಸು ಹೊಂದಿದೆ ಎಂದರು.

ಮಹಾಂತೇಶ ಬಿರಾದಾರ, ನಾಗೇಂದ್ರ ಹೂಗಾರ, ಲಿಂಗಣ್ಣ ಪಾಟೀಲ, ಶಿವು ಹೂಗಾರ, ಪರಮೇಶ್ ಪಾಟೀಲ, ಮಹೇಶ್ ಯರಗಲ್, ಅಣ್ಣಾರಾವ ಮಕಾಶಿ, ಕಾಶಿನಾಥ ಬಿರಾದಾರ ಇತರರು ಇದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here