ಕಲಬುರಗಿ: ಪಿ.ಡಿ.ಎಇಂಜನಿಯರಿಂಗಕಾಲೇಜಿನ ಸಿವಿಲ್ ಇಂಜನಿಯರಿಂಗ್ ವಿಭಾಗದಅಂತಿಮ ವರ್ಷದ ವಿದ್ಯಾರ್ಥಿಗಳಾದ ರಮ್ಯಾಶ್ರೀ ಗುಂಡಗುರ್ತಿ, ರಕ್ಷಿತಾಗೊಬ್ಬುರ, ಅಶ್ವಿನಿ ಪಾಟೀಲ, ಪವಿತ್ರಾ ಸೀತಾನಿ, ನಮ್ರತಾ ಹಿರೊಳಿ, ಆಬಿದ್ ಹುಸೈನ್ ಗೌಸುದ್ದಿನ, ಗುರುಬಸವ ಮಹಾದೇವ ಡೊಳ್ಳೆ, ದಿವ್ಯಾ ಮರ್ತೂರಕರ, ಅಮೀನಾ ಬೇಗಂ ರವರು ಬೆಂಗಳೂರ ಮೂಲದ ಪ್ರಖ್ಯಾತಕಂಪನಿಯಾದ ಮೇದಿನಿ ಡಿಸೈನ್ ಸರ್ವಿಸಸ್ ಕಂಪನಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಮೇಲಿನ ಒಂಬತ್ತು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಇಂದಿನ ವಿದ್ಯಾರ್ಥಿಗಳಲ್ಲಿ ಕೌಶಲ್ಯಅಭಿವೃದ್ಧಿ ಮತ್ತುಉದ್ಯಮಿ ಸ್ನೇಹಿ ಉದ್ಯಮ ಪೂರಕ ಪಠ್ಯಕ್ರಮಗಳ ಜ್ಞಾನಬೇಕು. ಕಾಲೇಜುಅಂತಹ ಹೊಸ ಹೊಸ ತಂತ್ರಜ್ಞಾನಗಳನ್ನು ತಮ್ಮ ಪಠ್ಯಕ್ರಮಗಳಲ್ಲಿ ಸೇರಿಸಬೇಕು. ೨೦೧೫ ರಿಂದ ನಮ್ಮ ಕಂಪನಿ ಪಿ.ಡಿ.ಎ.ಇಂಜನಿಯರಿಂಗಕಾಲೇಜಿನೊಡನೆಒಡಂಬಡಿಕೆ ದಿದೆಇದುಉತ್ತರಕರ್ನಾಟಕದಲ್ಲಿಯಉತ್ತಮಕಾಲೇಜುಎಂದು ಮೇದಿನಿ ಸರ್ವಿಸಸ್‌ಕಂಪನಿಯ ಮ್ಯಾನೆಜಿಂಗಡೆರೆಕ್ಟರ್ ಶ್ರೀ ಪ್ರದೀಪಕಲ್ಲೂರರವರುಆಯ್ಕೆ ಪತ್ರಗಳನ್ನು ವಿತರಿಸುತ್ತ ಮಾತನಾಡಿದರು.
ಪ್ರಾಚಾರ್ಯರಾದಡಾ.ಎಸ್.ಎಸ್. ಹೆಬ್ಬಾಳ ಉಪಪ್ರಾಚಾರ್ಯರಾದಡಾ.ಶಶಿಧರ ಕಲಶೆಟ್ಟಿ ಸಿವಿಲ್ ವಿಭಾಗದ ಮುಖ್ಯಸ್ಥರಾದಡಾ.ಎ.ಬಿ. ಹರವಾಳಕರ, ಪ್ರೊ. ನಿತಿನಕೊಡ್ಲಿ, ಮೆದಿನಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ಮೋಹನಕುಮಾರ ಕೆ, ಅಂಕಿತ ಬಿರಾದಾರ, ಡಾ.ಮಹಾದೇವಪ್ಪಾಗಾದಗೆ, ತರಬೇತಿ ಮತ್ತು ನೇಮಕಾತಿ ಅಧಿಕಾರಿಗಳು ಡಾ.ಬಾಬುರಾವ ಶೇರಿಕಾಆಯ್ಕೆ ಪತ್ರವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೈ.ಕ.ಶಿ.ಸಂಸ್ಥೆಯಅಧ್ಯಕ್ಷರಾಡಾ.ಭೀಮಾಶಂಕರ ಸಿ.ಬಿಲಗುಂದಿ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಆಡಳಿತ ಮಂಡಳಿಯ ಸದಸ್ಯರು ಸಿವಿಲ್ ವಿಭಾಗದ ಪ್ರಾಧ್ಯಾಪಕರ ವೃಂದ ಪಿ.ಡಿ.ಎಎ.ಕಾಲೇಜಿನ ಸದಸ್ಯರು ಸಿವಿಲ್ ವಿಭಾಗದ ಪ್ರಾಧ್ಯಾಪಕರ ವೃಂದ ಪಿ.ಡಿ.ಎ.ಕಾಲೇಜಿನ ಪ್ರಾಧ್ಯಾಪಕರ ವೃಂದ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.