ಶಹಾಬಾದ: ಪ್ರತಿಯೊಬ್ಬರು ವ್ಯಕ್ತಿಗತ ಸ್ವಚ್ಛತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಕೋವಿಡ್ 3ನೇ ಅಲೆ ಬಾರದಂತೆ ಸಹಕರಿಸಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ಕಾರ್ಮಿಕರಿಗೆ ನೀಡಿದರು.
ಅವರು ನಗರದ ಸಿಬರಕಟ್ಟ ಬಡಾವಣೆಯ ನಿಜಲಿಂಗಮ್ಮ ದೇವಸ್ಥಾನದ ಆವರಣದಲ್ಲಿ ಕಾರ್ಮಿಕ ಇಲಾಖೆ ಕಲಬುರಗಿ, ಸಂಸ್ಕಾರ ಪ್ರತಿμÁ್ಠನ ಹಾಗೂ ಜಾಗೃತಿ ಯುವ ಸೇವಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಟ್ಟಡ ಕಾರ್ಮಿಕರು ಕೂಲಿಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಸುರಕ್ಷಾ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.ಸಲಾಯಿತು.
ಕಾರ್ಮಿಕರ ಅಭಿವೃದ್ಧಿಗಾಗಿ ಇಲಾಖೆಯು ಸಾಕಷ್ಟು ಸೌಕರ್ಯಗಳನ್ನು ಕಲಿಸಿದೆ.ಅವರ ರಕ್ಷಣೆಯ ದೃಷ್ಠಿಯಿಂದ ಸುರಕ್ಷಾ ಕಿಟ್‍ಗಳನ್ನು ವಿತರಣೆ ಮಾಡಲಾಗುತ್ತಿದೆ.ಯಾವುದೇ ಕಾರಣಕ್ಕೂ ಕಿಟ್‍ಗಳನ್ನು ದುರುಪಯೋಗಪಡಿಸಿಕೊಳ್ಳದೇ ಬಳಕೆ ಮಾಡುವ ಮೂಲಕ ಜೀವ ರಕ್ಷಣೆಗೆ ಮುಂದಾಗಬೇಕಂದು ಹೇಳಿದರು.
ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ,ಜಗತ್ತಿನಾದ್ಯಂತ ವ್ಯಾಪಿಸಿದ್ದ ಮೊದಲ ಹಾಗೂ ಎರಡನೇ ಕೊರೋನಾ ಅಲೆಯಿಂದಾಗಿ ಜನರು ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಹಾಗಾಗಿ 3ನೇ ಅಲೆ ಬಾರದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಜ್ಞರು ಸೂಚಿಸಿದ್ದು, ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಜಾಗೃತರಾಗಬೇಕು ಎಂದು ತಿಳಿಸಿದರು.
ಸಂಸ್ಕಾರ ಪ್ರತಿμÁ್ಠನದ ವಿಠ್ಠಲ್ ಚಿಕಣಿ, ಜಾಗೃತಿ ಯುವ ಸೇವಾ ಸಂಸ್ಥೆಯ ಹಣಮಂತ ಜಾಧವ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣಾ ನಾಟೀಕಾರ, ಭಗವಾನ ದಂಡಗೂಲಕರ್, ರಾಮಸ್ವಾಮಿ ದೇವಕರ್, ರಾಮಣ್ಣ ಇಬ್ರಾಹಿಂಪುರ, ಯಲ್ಲಪ್ಪ ಬಾಂಬೆ, ದುರ್ಗಪ್ಪ ದೇವಕರ, ನಾಗರಾಜ ಕುಸಾಳೆ, ದುರ್ಗಪ್ಪ ಪವಾರ, ರಮೇಶ ಪವಾರ,ಸಂಜಯ ವಿಟ್ಕರ್, ಮೈಲಾರಿ, ಇತರರು ಉಪಸ್ಥಿತರಿದ್ದರು.