ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ ಲಿಂಗರಾಜ ಶಾಸ್ತ್ರೀ  ಸಂತಾಪ ಸಭೆ

0
101

ಕಲಬುರಗಿ: ಬೀದರ ಜಿಲ್ಲೆಯ ಬಸವಕಲ್ಯಾಣದ ಬಳಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀ ಅವರಿಗೆ ಸಂತಾಪ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ಮತ್ತು ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಭಾ?ಣಕಾರರು ಬಹುಮುಖ ವ್ಯಕ್ತಿತ್ವದ ಡಾ. ಲಿಂಗರಾಜ ಶಾಸ್ತ್ರೀಯವರು ವಿಶ್ವವಿದ್ಯಾಲಯಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.

ಡಾ.ಶಾಸ್ತ್ರೀಯವರ ಸಹಪಾಠಿಯಾಗಿದ್ದ ಶgಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಡಾ. ಶಾಸ್ತ್ರಿಯವರ ವಿದ್ಯಾರ್ಥಿ ಜೀವನ, ರಾಜಕೀಯ ನಡೆ ಮತ್ತು ಶಿಕ್ಷಣ ತಜ್ಞರಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ತಮ್ಮ ಜೊತೆಗಿದ್ದ ಅವರ ದೀರ್ಘ ಒಡನಾಟವನ್ನು ನೆನಪಿಸಿಕೊಂಡರು. ಡಾ.ಶಾಸ್ತ್ರೀಯವರ ಸಾವು ನನಗೆ ವೈಯಕ್ತಿಕವಾಗಿ ತೀವ್ರ ದುಃಖ ತಂದಿದೆ ಇದು ತುಂಬಲಾರದ ನ? ಎಂದರು.

Contact Your\'s Advertisement; 9902492681

ಡಾ.ಶಾಸ್ತ್ರೀಯವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೂ, ವಿದ್ಯಾರ್ಥಿ ನಾಯಕರಾಗಿ ಮತ್ತು ರಾಜಕೀಯ ಕಾರ್ಯಕರ್ತರಾಗಿ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮ ಚಾಣಾಕ್ಷತೆಯನ್ನು ಪ್ರದರ್ಶಿಸುತ್ತಿದ್ದರು. ಹಲವು ವ?ಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಡಾ. ಶಾಸ್ತ್ರೀಯವರು ತಮ್ಮನ್ನು ತಾವು ಶಿಕ್ಷಣತಜ್ಞರಾಗಿ ಪರಿವರ್ತಿಸಿ ಉತ್ತಮ ಶಿಕ್ಷಕರಾಗಿ ಅನೇಕರ ಮೆಚ್ಚುಗೆಯನ್ನು ಗಳಿಸಿದ್ದಾರೆ ಎಂದು ಶ್ರೀ ದೇಶಮುಖ ಹೇಳಿದರು. ಅವರ ಅಕಾಲಿಕ ಮರಣವು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯಕ್ಕೆ ತುಂಬಲಾರದ ನ?ವಾಗಿದೆ.

ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ.ವಿ.ನಿಷ್ಠಿ ಅವರು ಸಂತಾಪ ಸಭೆಯಲ್ಲಿ ಮಾತನಾಡುತ್ತಾ ಉತ್ತಮ ಆಡಳಿತಗಾರರಾಗಿದ್ದ ಡಾ.ಶಾಸ್ತ್ರೀಯವರ ಸಾವಿನ ಸುದ್ದಿಯನ್ನು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರಿಗೆ ತಿಳಿಸಿದಾಗ ತೀವ್ರ ಅಘಾತ ವ್ಯಕ್ತಪಡಿಸಿ ಅವರು ಹೇಳಿದ ಮೊದಲ ಪದವೆಂದರೆ, ಡಾ.ಶಾಸ್ತ್ರೀಯವರ ಮಕ್ಕಳನ್ನು ಸಂಘ ಮತ್ತು ವಿಶ್ವವಿದ್ಯಾಲಯ ನೋಡಿಕೊಳ್ಳಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಅವರು ತಮ್ಮ ಭಾ?ಣದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಆಪ್ತರಾಗಿದ್ದ ಡಾ.ಶಾಸ್ತ್ರೀಯವರ ಸಾವು ನನಗೆ ವೈಯಕ್ತಿಕ ನ? ಉಂಟುಮಾಡಿದೆ ಮತ್ತು ಅವರ ಒಡನಾಟದ ನೆನಪುಗಳು ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿಯುತ್ತವೆ, ಅವರು ತುಂಬಾ ಒಳ್ಳೆಯ ಮನಸ್ಸಿನವರಾಗಿದ್ದರು ಎಂದರು.

ಡಾ.ಬಿಡವೆ ಅವರು ಮಾತನಾಡುತ್ತಾ ಡಾ.ಶಾಸ್ತ್ರೀಯವರ ರಾಜಕೀಯದ ಸುದೀರ್ಘ ಅವಧಿಯಲ್ಲಿ ಎಲ್ಲರ ಜೊತೆ ನಿಕಟ ಸಂಪರ್ಕ ಹೊಂದಿದ್ದು ಸರ್ಕಾರದ ಮಟ್ಟದಲ್ಲಿ ವಿಶ್ವವಿದ್ಯಾಲಯದ ಕೆಲಸಗಳನ್ನು ಸುಲಭವಾಗಿ ಕೈಗೊಳ್ಳಲು ಬಹಳ ಸಹಾಯಕವಾಗಿವೆ ಎಂದು ಹೇಳಿದರು. ಸಮ-ಕುಲಪತಿ ಪ್ರೊ ವಿ.ಡಿ.ಮೈತ್ರಿ ಅವರು ತಮ್ಮ ಭಾ?ಣದಲ್ಲಿ ಡಾ.ಶಾಸ್ತ್ರೀ ಬಿಕ್ಕಟ್ಟಿನ ಸಮಯದಲ್ಲಿ ಅವಲಂಬಿಸಬೇಕಾದ ವ್ಯಕ್ತಿ ಮತ್ತು ಅವರ ಮುಖದಲ್ಲಿ ಎಂದೆಂದಿಗೂ ಮುಗುಳ್ನಗೆಯೊಂದಿಗೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು ಎಂದು ಹೇಳಿದರು.

ಡಾ.ಶಾಸ್ತ್ರೀಯವರ ನೆನಪುಗಳನ್ನು ವಿಶ್ವವಿದ್ಯಾಲಯ ಮತ್ತು ಸಂಘದಲ್ಲಿ ಅವರ ಜೊತೆ ಸಂಬಂಧ ಹೊಂದಿದ್ದವರ ಮನಸ್ಸಿನಿಂದ ತೆಗೆದುಹಾಕಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದರು. ವಿವಿ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ತಮ್ಮ ಭಾ?ಣದಲ್ಲಿ ಡಾ ಶಾಸ್ತ್ರಿ ಇನ್ನಿಲ್ಲವೆಂದು ನಂಬಲು ಸಾಧ್ಯವಾಗುತ್ತಿಲ್ಲ ಮತ್ತು ಅವರ ಸಾವು ವಿಶ್ವವಿದ್ಯಾಲಯ ಮತ್ತು ಸಂಘದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಆಘಾತ ತಂದಿದೆ ಎಂದು ಹೇಳಿದರು.

ಹಣಕಾಸು ಅಧಿಕಾರಿ ಪ್ರೊಫೆಸರ್ ಕಿರಣ್ ಮಕಾ ಅವರು ತಮ್ಮ ನುಡಿಗಳಲ್ಲಿ ಡಾ. ಶಾಸ್ತ್ರಿಯವರು ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಸಂಪರ್ಕ ಹೊಂದಿದ್ದರು ಮತ್ತು ಇದು ವಿಶ್ವವಿದ್ಯಾಲಯದ ಹಲವು ಪ್ರಸ್ತಾವನೆಗಳಿಗೆ ಸರಕಾರದ ಮಟ್ಟದಲ್ಲಿ ಅನುಮತಿಗಳನ್ನು ಪಡೆಯಲು ಸಹಾಯವಾಗುತ್ತಿತ್ತು ಎಂದರು. ಡೀನ್ ಡಾ.ಬಸವರಾಜ ಮಠಪತಿ ಮತ್ತು ಆಂಗ್ಲ ವಿಭಾಗದ ಡೀನ್ ಡಾ.ಎಸ್.ಜಿ.ಡೊಳ್ಳೇಗೌಡರ ಈ ಸಂದರ್ಭದಲ್ಲಿ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here