ಆಳಂದ ತಾಲೂಕಿನ ೨೩ ದೇವಾಲಯಗಳಿಗೆ ೧೬೨.೪೯ ಲಕ್ಷ ಅನುದಾನ

0
23

ಆಳಂದ ತಾಲೂಕಿನ ವಿವಿಧ ೨೩ ದೇವಾಲಯಗಳಿಗೆ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯಿಂದ ೧೬೨.೪೯ ಲಕ್ಷ ಅನುದಾನ ಮಂಜೂರಿ ಮಾಡಲಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡ ಶಾಸಕರು, ೨೦೧೮ನೇ ಸಾಲಿನಿಂದ ೨೦೨೧ರ ವರೆಗೆ ದುರಸ್ತಿ/ ಜೀರ್ಣೋದ್ಧಾರ/ ಅಭಿವೃದ್ಧಿ, ಆರಾಧನಾ ಯೋಜನೆ, ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ಉಪ ಯೋಜನೆಯಡಿ ಆಳಂದ ತಾಲೂಕಿನ ವಿವಿಧ ಗ್ರಾಮಗಳ ದೇವಾಲಯಗಳ ಅಭಿವೃದ್ಧಿಗೆ ಒಟ್ಟು ೧೬೨.೪೯ ಲಕ್ಷ ಅನುದಾನ ಸರ್ಕಾರದಿಂದ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ನಂತರ ಪ್ರತಿಕ್ರಿಯಿಸಿದ ಶಾಸಕರು ಇನ್ನೂ ಹೆಚ್ಚಿನ ದೇವಾಲಯಗಳ, ಮಠಗಳ ಅಭಿವೃದ್ಧಿಗಾಗಿ ಸರ್ಕಾರದ ಜೊತೆ ಮಾತನಾಡಿ ಅನುದಾನ ತರಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here