ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

0
18

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದುರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರೊ. ಎಚ್.ಟಿ. ಪೋತೆಯವರು ಮಾತಾಡುತ್ತಾ ವಿದ್ಯಾರ್ಥಿಗಳಲ್ಲಿ ತಾಳ್ಮೆ, ವಿವೇಕ, ಸಹನೆ, ಜ್ಞಾನ ದಾಹದಿಂದ ಅಧ್ಯಯನಶೀಲರಾದರೆ ನಿಮ್ಮ ಬದುಕು ಉಜ್ವಲವಾಗಿ ಕಟ್ಟಿಕೊಳ್ಳಬಹುದು.

Contact Your\'s Advertisement; 9902492681

ಅರಿವೇ ಗುರುವಾಗಿಸಿಕೊಳ್ಳಬೇಕು; ನಮ್ಮ ಮನಸ್ಸಿನ ಅಂತರಾಳದಲ್ಲಿರುವ ಕತ್ತಲೆ, ಅಜ್ಞಾನವನ್ನು ಕಿತ್ತೆಸೆದು ಜ್ಞಾನದ ಅನುಭವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜಸುಧಾರಕರ ದಾರ್ಶನಿಕರ ಚಿಂತನೆ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ದೇಶಕ್ಕೆ ಒಂದು ಪರಂಪರೆಯಿದೆ ಪ್ರಾಮುಖ್ಯತೆಯಿದೆ. ಇಡೀ ಜಗತ್ತಿಗೆ ಜ್ಞಾನ ನೀಡಿದ ನಲಂದಾ ವಿಶ್ವವಿದ್ಯಾಲಯದ ಪರಂಪರೆ ಪುನರ್ ಸೃಷ್ಟಿಸಬೇಕಾಗಿದೆ, ಶಿಕ್ಷಣ ನಿಮ್ಮ ಉಸಿರಾಗಬೆಕು, ಗುರಿ ಇಡೇರಿಸುವತ್ತಾ ನಿರಂತರ ಪ್ರಯತ್ನಿಸಬೇಕು ಇದೇ ಶೂನ್ಯತತ್ವ, ನಾವೆಲ್ಲರೂ ಶೂನ್ಯದೆಡೆಗೆ ಸಾಗಬೇಕು, ನಮ್ಮ ಸಾಮಾಜಿಕ ಜವಬ್ದಾರಿ ಹೆಚ್ಚಿಸಿಕೊಂಡು ಜ್ಞಾನದ ಕ್ಷೀತಿಜ ವಿಸ್ತರಿಸಿಕೊಳ್ಳಿ ಅಂದಾಗ ಮಾತ್ರ ಪ್ರಬುದ್ಧರಾಗುತ್ತಿರಿ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾ. ಸುರೇಶ್ ಎಲ್. ಜಾಧವ ಅವರು ಮಾತಾಡುತ್ತಾ ವಿದ್ಯಾರ್ಥಿಗಳು ಮುಂದಿನ ನಿಮ್ಮ ಭವಿಷ್ಯದ ಬಗ್ಗೆ ಆಲೋಚಿಸಿ ನಿಮ್ಮ ಬದುಕನ್ನು ಶಿಕ್ಷಣದಿಂದ ಉಜ್ವಲ ಗೊಳಿಸಿಕೊಳ್ಳಿ ಎಂದು ಕವಿ ಮಾತು ಹೇಳಿದರು.

ಅದೇ ರೀತಿ ಡಾ. ಅಶೋಕ ಪದ್ಮಾಕರ ಮಟ್ಟಿಯವರು ಮಾತಾಡುತ್ತಾ ಹೊಟ್ಟೆಯ ಹಸಿವೆಗಿಂತ ಜ್ಞಾನದ ಹಸಿವನ್ನು ನಿಗಿಸಿಕೊಂಡು ಮುನ್ನಡೆದಾಗ ಮಾತ್ರ ಶಿಕ್ಷಕನ ಕಾರ್ಯಸಾರ್ಥಕವಾಗುತ್ತದೆ. ಶಿಕ್ಷಕ ನಿಶ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳ ಬದುಕು ರೂಪಿಸ ಬೇಕೆಂದರು. ಡಾ. ಶರಣಪ್ಪ ಮಾಳಗಿಯವರು ಮಾತಾಡುತ್ತಾ ಇಂದಿನ ದಿನಮಾನಗಳು ಸವಾಲಿನದ್ದಾಗಿವೆ. ಆ ಕಾರಣಕ್ಕಾಗಿ ಜ್ಞಾನಾರ್ಜನೆಯನ್ನು ಛಲದಿಂದ ಮಾಡಬೇಕಾದದ್ದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕೆಂದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಎಲ್ಲ ಕನ್ನಡ ಅತಿಥಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿ ಜೀವನ್ ಪ್ರಾರ್ಥಿಸಿದರು, ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿ ಅಂಬ್ರೇಶ್ ನಿರೂಪಿಸಿದರು, ನಾಗಪ್ಪ ಸ್ವಾಗತಿಸಿದರು, ಪ್ರಥಮ ವರ್ಷದ ವಿದ್ಯಾರ್ಥಿ ಶ್ರೀಧರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here