ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಸಿಬ್ಬಂದಿ ನೇಮಿಸಲು ಡಿಎಸ್‌ಎಸ್ ಒತ್ತಾಯ

0
16

ಸುರಪುರ: ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಗಳಿಲ್ಲದೆ ಗ್ರಾಹಕರಿಗೆ ತೀವ್ರ ತೊಂದರೆಯಾಗಿದೆ.ಆದ್ದರಿಂದ ಕೂಡಲೇ ಸಿಬ್ಬಂದಿಗಳನ್ನು ನೇಮಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ ಸಾಗರ ಬಣ) ಮುಖಂಡರು ಬ್ಯಾಂಕ್ ಶಾಖೆ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ಈ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಗಳಿಲ್ಲದೆ ನಿತ್ಯವು ಗ್ರಾಹಕರು ಪರದಾಡುವಂತಾಗಿದೆ.ಈ ಮೊದಲು ೬ ಜನ ಸಿಬ್ಬಂದಿಗಳಿದ್ದರು,ಆದರೆ ಈಗ ಕೇವಲ ಇಬ್ಬರು ಮಾತ್ರ ಸಿಬ್ಬಂದಿಗಳಿದ್ದಾರೆ.

Contact Your\'s Advertisement; 9902492681

ಆದರೆ ನಿತ್ಯವು ನೂರಾರು ಸಂಖ್ಯೆಯಲ್ಲಿ ಬರುವ ಗ್ರಾಹಕರಿಗೆ ಸರಿಯಾದ ಕೆಲಸಗಳು ಆಗದಿರುವುದರಿಂದ ಬೇಸತ್ತಿದ್ದಾರೆ.ಅಲ್ಲದೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃಧ್ಧಿ ಸಂಸ್ಥೆಯ ಖಾತೆ ಇದೇ ಬ್ಯಾಂಕ್‌ಲ್ಲಿದ್ದು,ವಾರಕ್ಕೆ ಸುಮಾರು ೧ ಕೋಟಿ ರೂಪಾಯಿಗಳ ವ್ಯವಹಾರ ಮಾಡುತ್ತದೆ,ಅಲ್ಲದೆ ಮಹಿಳಾ ಸ್ವಸಹಾಯ ಸಂಘಗಳು ಅನೇಕ ಇದೇ ಶಾಖೆಯಲ್ಲಿ ವ್ಯವಹಾರ ನಡೆಸುತ್ತವೆ,ಅಲ್ಲದೆ ಗ್ರಾಮೀಣ ಭಾಗದ ರೈತರ ಖಾತೆಗಳು ಇದೇ ಬ್ಯಾಂಕ್‌ಲ್ಲಿವೆ,ಈಗ ಬೆಳೆ ಸಾಲದಂತಹ ಯೋಜನೆಗಳು ಜಾರಿಯಲ್ಲಿರುವಾಗ ರೈತರಿಗೆ ಸಕಾಲದಲ್ಲಿ ಸೌಲಭ್ಯ ದೊರೆಯದೆ ತೊಂದರೆ ಪಡುವಂತಾಗಿದೆ.ಆದ್ದರಿಂದ ಕೂಡಲೇ ಶಾಖೆಯಲ್ಲಿ ಅಗತ್ಯವಿರುವ ಆರು ಜನ ಸಿಬ್ಬಂದಿಗಳನ್ನು ನೇಮಕಗೊಳಿಸಬೇಕು.ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ಥೆದಾರರು ಹಾಗು ಶಾಖೆಯ ವ್ಯವಸ್ಥಾಪಕರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ವೀರಭದ್ರಪ್ಪ ದೊಡ್ಡಮನಿ ತಳವಾರಗೇರಾ,ತಿಪ್ಪಣ್ಣ ಶೆಳ್ಳಗಿ,ಶೇಖರ ಮಂಗಳೂರು,ಖಾಜಾ ಅಜ್ಮೀರ್,ಎಮ್.ಪಟೇಲ್,ಮರಿಲಿಂಗ ಗುಡಿಮನಿ,ಭೀiರಾಯ ಮಂಗಳೂರು,ಶಿವಪ್ಪ ಶೆಳ್ಳಗಿ,ಮಹಾದೇವ ಚಲುವಾದಿ,ಶರಣಬಸವ ಮಂಗಳೂರು ಸೇರಿದಂತೆ ಇನ್ನೂ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here