ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಮನೋಭಾವ ಬೆಳಸುವುದು ಅವಶ್ಯಕ: ಸಿ.ಎಸ್. ಸಾಲಿಮಠ

0
66

ಕಲಬುರಗಿ: “ಇಂದಿನ ಯುವಜನರಲ್ಲಿ ಉದ್ಯಮಶೀಲತೆಯ ಕುರಿತ ಮನೋಭಾವನೆ ಬೆಳಸುವುದು ಅಗತ್ಯವಾಗಿದೆ “ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ.ಸಿ.ಎಸ್. ಸಾಲಿಮಠ ಅವರು ತಿಳಿಸಿದರು.

ಅವರು ಮಂಗಳವಾರ ಇಲ್ಲಿನ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ಹೊಸ ಪಿ.ಜಿ ಕಟ್ಟಡದಲ್ಲಿ ಕರ್ನಾಟಕ ಉದ್ಯಮಶೀಲತಾವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಕೌಶಲ್ಯಾಭಿವೃದ್ಧಿ, ಉದ್ಯಾನಶೀಲತೆ ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2021-22 ನೇ ಸಾಲಿನ ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶದಲ್ಲಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವ ಕರ್ನಾಟಕ ಕಲಿಕೆಯೊಂದಿಗೆ ಕೌಶಲ್ಯದ ಬಗ್ಗೆಯೂ ಕಲಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅದರ ಮೊದಲ ಹೆಜ್ಜೆಯಾಗಿ ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯಗಳ ಬಗ್ಗೆ ಭೋದನೆ ನೀಡುವುದಾಗಿದೆ. ಯುವಜನರಲ್ಲಿ ಉದ್ಯಮದ ಕುರಿತು ಆಸಕ್ತಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಡಾಕ್ ನ ಪ್ರಾದೇಶಿಕ ಜಂಟಿ ನಿರ್ದೇಶಕ ಜಿ.ಯು. ಹುಡೇದ ಮಾತಾನಾಡಿ ‘ಯುವಕರು ದೇಶದ ಶಕ್ತಿ, ಆರ್ಥಿಕ ಅಭಿವೃದ್ಧಿ ವೃದ್ಧಿಸಲು ಯುವಕರು ಹೆಚ್ಚು ಹೆಚ್ಚು ಉದ್ಯಮಶೀಲರಾಗಬೇಕು. ಇಂದಿನ ಯುವಪೀಳಿಗೆಗೆ ಬೇಕಾಗಿರುವ ಮೃದು ಕೌಶಲ್ಯ ಹಾಗೂ ಮುಖ್ಯ ಕೌಶಲ್ಯದ ಕುರಿತು ತರಬೇತಿ ನೀಡುವಲ್ಲಿ ಸಿಡಾಕ್ ಶ್ರಮಿಸಲಿದೆ, ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್ ಬಿ. ರಘೋಜಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಶಂಕ್ರೆಪ್ಪ ಹತ್ತಿ, ಪಿ.ಜಿ ವಿಭಾಗದ ಡೀನ್ ಡಾ.ಅನಿಲಕುಮಾರ ಡಿ. ಹಾಲೂ, ಮಹಾವಿದ್ಯಾಲಯದ ನಿಯೋಜನೆ ಕೋಶದ ಸಂಯೋಜಕ ಚಂದ್ರಶೇಖರ ಆರ್. ಚಿಕ್ಕೇಗೌಡ, ಫ್ಯಾಕಲ್ಟೀ & ಕನ್ಸ್‍ಲ್ಟಂಟ್ ಸಿಡಾಕ್ ನ ಸೈಯದ್ ಆಷ್ಫಕ್ ಅಹ್ಮದ್ ಅವರು ಸ್ವಾಗತಿಸಿದರು. ಕುಮಾರಿ ಸುಧಾರಾಣಿ ಪ್ರಾರ್ಥನೆ ಗೀತೆ ಹಾಡಿದರು. ಸಿಡಾಕ್ ನ ತರಬೇತಿಗಾರ್ತಿ ಜಯಶ್ರೀ ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಿಡಾಕ್ ನ ತರಬೇತಿಗಾರ್ತಿ ಮಾಧುರಿ ಮಾನಕರ್ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here