ಕಲಬುರಗಿ: ಸೇಡಂ ಮತಕ್ಷೇತ್ರದ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ್ ಪಾಟೀಲ ತೇಲ್ಕೂರ ಅವರು ಕ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷ ಸ್ಥಾನ ಸಮರ್ಪಕವಾಗಿ ನಿರ್ವಾಹಣೆ ಮಾಡುವಲ್ಲಿ ವಿಫಲವಾಗಿದು ಕೂಡಲೆ ರಾಜಿನಾಮೆ ನೀಡಬೇಕೆದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಆಗ್ರಹಿಸಿದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಸೇಡಂ ತಾಲ್ಲೂಕಿನ ಮಲ್ಲಾಬಾದ್ ಮಾರ್ಗದಿಂದ ಬೊಂದೆಂಪಲ್ಲಿ ಗ್ರಾಮಕ್ಕೆ ಬಸ್ ಒದಗಿಸುವಂತೆ ಮುಧೋಳ ಬಸ್ ನಿಲ್ದಾಣದಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿನಿಯರು ಸುರಿಯುತ್ತಿರುವ ಮಳೆಯಲ್ಲಿಯೇ ಬಸ್ ತಡೆದು ಪ್ರತಿಭಟನೆ ನಡೆಸಿರುವುದರಿಂದ ಸ್ಥಳಿಯ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ ಸಂಸ್ಥೆಯ ಅಧ್ಯಕ್ಷ ಸ್ಥಾನದ ಆಡಳಿತ ನಡೆಸುವಲ್ಲಿ ವಿಫಲವಾಗಿದು ಕಾಣಿಸುತಿದೆ.
ಶಾಲಾ-ಕಾಲೇಜು ಆರಂಭವಾಗಿ ಅನೇಕ ದಿನಗಳಾಗುತ್ತಾ ಬಂದಿವೆ. ಆದರೆ ಹಲವು ಗ್ರಾಮಗಳಿಗೆ ಇವರೆಗೂ ಬಸ್ ಆರಂಭವಾಗಿಲ್ಲ. ಕೆಲಕಡೆ ಬಸ್ ಸೌಲಭ್ಯ ಇದ್ದರು ಸರಿಯಾದ ಸಮಯಕ್ಕೆ ಇಲ್ಲಾ ಶಾಲಾ-ಕಾಲೇಜುಗಳು ನಿತ್ಯವು ನಡೆಯುತ್ತಿವೆ. ಖಾಸಗಿ ವಾಹನಗಳಿಗೆ ಹಣ ಕೊಟ್ಟು ಬರಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಮಧ್ಯಮ ವರ್ಗದವರು ಶಾಲೆಗೆ ತೆರಳುವುದೇ ದೊಡ್ಡದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪಾಲಕರು, ಹಣ ಕೊಡಲು ಕಷ್ಟಪಡುತ್ತಿದ್ದಾರೆ.
ಕೂಡಲೆ ಸೇಡಂ ಮತಕ್ಷೇತ್ರದ ಪ್ರತಿ ಗ್ರಾಮಗಳಿಗೂ ಬಸ್ ಸಂಚಾರ ಪ್ರಾರಂಭಿಸಬೇಕು ಎಂದು ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಪ್ರಕಟಣೆಯಲ್ಲಿ ಒತ್ತಾಯಿಸಿದಾರೆ.