ಗ್ರಾಪಂಯಲ್ಲಿ ಹೊಲಿಗೆ ಯಂತ್ರಗಳ ವಿತರಣೆ

0
113

ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯತ ಕಾರ್ಯಾಲಯ ಬುಧವಾರ ೪೦ ಜನ ಅಂಗವಿಕಲರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಸುಷ್ಮಾ ಮರಲಿಂಗ ಗಂಗಭೋ, ಗ್ರಾಪಂಯ ೧೪ ಮತ್ತು ೧೫ ನೇ ಹಣಕಾಸು ಯೋಜನೆಯ ಅಡಿಯಲ್ಲಿ ೫% ಅಂಗವಿಕಲರ ಅನುದಾನದಲ್ಲಿ ಅಂಗವಿಕಲರಿಗೆ ಹೊಲಿಗೆ ಯಂತ್ರ ನೀಡಲಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸತಕ್ಕದ್ದು.ಸರ್ಕಾರ ಅಂಗವಿಕಲರಿಗಾಗಿ ಅನುದಾನ ಒದಗಿಸಿದ್ದು, ಅದನ್ನು ವಿತರಿಸಲು ವಿವಿಧ ಸಂಘಟನೆಗಳು ಒತ್ತಾಯಿಸಿದ್ದರು.ಆದರೆ ಕೆಲವು ತಾತ್ರಿಕ ತೊಂದರೆಗಳಿಂದ ವಿಳಂಬವಾಗಿತ್ತು ಎಂದು ಹೇಳಿದರು.

Contact Your\'s Advertisement; 9902492681

ಗ್ರಾಪಂ ಉಪಾಧ್ಯಕ್ಷೆ ರೇ? ಮಲ್ಲಿನಾಥ ಕರಣಿಕ, ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗಚಿತ್ರ, ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಹೋರಾಟಕ್ಕ ಮಣಿದ ಗ್ರಾಪಂ ಅಧಿಕಾರಿ : ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಅಂಗವಿಕಲರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಬೇಕು.ಇಲ್ಲದಿದ್ದರೆ ಸೆಪ್ಟೆಂಬರ್ ೨೩ ರಂದು ಗ್ರಾಪಂ ಎದುರುಗಡೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತೆವೆ ಎಂದು ಮಂಗಳವಾರ ವಿವಿಧ ಸಂಘಟನೆಗಳ ವತಿಯಿಂದ ಕಾರ್ಮಿಕ ಮುಖಂಡ ಸುನೀಲ ಮಾನ್ಪಡೆ ನೇತೃತ್ವದಲ್ಲಿ ತಾಪಂ ಇಓ ಲಕ್ಷ್ಮಣ ಶೃಂಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಬೆನ್ನಲೇ ಬುಧವಾರ ಸಂಘಟನೆಗಳ ಒತ್ತಡಕ್ಕೆ ಮಣಿದು ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಅಂಗವಿಕಲರಿಗೆ ಕಳೆದ ವರ್ಷದ ಅನುದಾನದಲ್ಲಿ ನೀಡಬೇಕಾದ ಹೊಲಿಗೆ ಯಂತ್ರಗಳನ್ನು ನೀಡಿದ್ದೀರಿ. ಇದೇ ರೀತಿ ಈ ವರ್ಷದ ಅನುದಾನದಲ್ಲಿ ಬೇಗನೆ ಅಂಗವಿಕಲರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಾರದರ್ಶಕವಾಗಿ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ, ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ, ಕರವೇ ಅಧ್ಯಕ್ಷ ವಿಶ್ವರಾಜ ಫಿರೋಜಾಬಾದ, ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ, ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here