ಕಲಬುರಗಿ: ೧೯ ವರ್ಷದ ಯುವಕನಿಗೆ ರಸ್ತೆ ಅಪಘಾತದಲ್ಲಿ ಬಲಗೈ ಮೊಣಕೈ, ತೋಳಿಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತದಿಂದ ಬಳಲುತ್ತಿದ್ದ, ತಕ್ಷಣ ಮಣೂರ ಆಸ್ಪತ್ರೆಗೆ ಆತನನ್ನು ದಾಖಲಿಸಿ ಸತತ ೬ ಗಂಟೆಗಳವರೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರುಖ ಮನೂರ ತಿಳಿಸಿದರು.
ನಗರದ ಸೋನಿಯಾಗಾಂಧಿ ಕಾಲೋನಿಯ ನಿವಾಸಿ ಇಸ್ಮಾಯಿಲ್ ಎಂಡಿ ವಾಜೀದ್ (೧೯) ಎಂಬಾತನಿಗೆ ಯಶಸ್ವಿ ಚಿಕಿತ್ಸೆಗೊಳಗಾದ ಯುವಕನಾಗಿದ್ದಾನೆ. ಈಗ ಆತನ ಕೈ ಸಂಪೂರ್ಣ ಗುಣಮುಖವಾಗಿ, ಭಾರ ಎತ್ತುವ ರೀತಿ ಕಾರ್ಯನಿರ್ವಹಿಸಲಿದೆ ಎಂದರು.
ಘಟನೆ ಹಿನ್ನೆಲೆ ಕಳೆದ ಆ. ೧೯ ರಂದು ನಗರದಲ್ಲಿ ಅಪರಿಚಿತ ವಾಹನವೊಂದು ರಸ್ತೆ ಅಪಘಾತದಲ್ಲಿ ಇಸ್ಮಾಯಿಲ್ ಕೈ ತೀವ್ರ ರಕ್ತಸಿಕ್ತ ಗಾಯಗಳಾಗಿದ್ದವು. ಸ್ನಾಯು, ಬಲವಾಗಿ ಮೊಣಕೈ ಜಂಟಿ ಹಾನಿಗೊಳಗಾದ ಸ್ನಾಯುಗಳೊಂದಿಗೆ ರೋಗಿಯು ಆಘಾತಕ್ಕೊಳಗಾಗಿದ್ದನು. ಎಲುಬಿನ ಸ್ಥಿರೀಕರಣ/ ಸಾಮಾನ್ಯ ಫ್ಲೆಕ್ಟರ್ ಸ್ನಾಯುವಿನ ದುರಸ್ತಿಗೆ ಒಳಗಾಗಿದ್ದರು. ರೋಗಿಯನ್ನು ಹಿಮೋಡೈನಮಿಕ್ ಆಗಿ ಸ್ಥಿರಗೊಳಿಸಲಾಯಿತು. ನಂತರ ಆತನ ಮೊಳಕಾಲಿನ ಚರ್ಮ ಲೇಪಿಸಿ ಕಸಿ ಮಾಡಲಾಗಿದೆ ಎಂದು ಪ್ಲಾಸ್ಟಿಕ್ ಸರ್ಜನ್ ಡಾ. ಅನೀಲ್ ಮಲ್ಹಾರಿ ಮಾಹಿತಿ ನೀಡಿದರು.
ವ್ಯವಸ್ಥಾಪಕ ನಿರ್ದೇಶಕ ಡಾ. ಫಾರೂಖ ಅಹ್ಮದ್ ಮನೂರ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞ ಡಾ. ಅನಿಲ್ ಎಸ್.ಕೆ, ಪ್ಲಾಸ್ಟಿಕ್ ಸರ್ಜನ್ ಡಾ. ಪವನ್, ಮುಖ್ಯ ಅರ್ಥೋ ಸರ್ಜರಿ ಡಾ. ಎಂಡಿ ಎಸ್. ಅಹ್ಮದ್, ಅಂಥೋಸ್ಟಿಟ್ ಡಾ. ಶಫಿಯಾ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಪ್ಲಾಸ್ಟಿಕ್ ಸರ್ಜರಿ ಡಾ. ಅನಿಲ್ ಮಲ್ಹಾರಿ, ಅರವಳಿಕೆ ತಜ್ಞ ಡಾ. ಅನಿಲ್ ಎಸ್.ಕೆ, ಪ್ಲಾಸ್ಟಿಕ್ ಸರ್ಜನ್ ಡಾ. ಪವನ್, ಮುಖ್ಯ ಅರ್ಥೋ ಸರ್ಜರಿ ಡಾ. ಎಂಡಿ ಎಸ್. ಅಹ್ಮದ್, ಅಂಥೋಸ್ಟಿಟ್ ಡಾ. ಶಫಿಯಾ, ಡಾ. ಸನಾ, ಡಾ. ಜುಬೇದಾ, ಜನರಲ್ ಮ್ಯಾನೇಜರ್ ರೂಪಾತಾರಾ, ಮ್ಯಾನೇಜರ್ ಸೂರ್ಯ ರೆಡ್ಡಿ ಇದ್ದರು.
ನಗರದಲ್ಲಿ, ಮಣೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಎಲ್ಲಾ ರೀತಿಯ ಟ್ರಾಮಾ ಮತ್ತು ಕ್ರಿಟಿಕಲ್ ಕೇರ್ ಪ್ರಕರಣಗಳನ್ನು ನಿರ್ವಹಿಸಿ. ಇದು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಚಿಕಿತ್ಸೆಗಳಿಗಾಗಿ ನಗರದಿಂದ ಹೊರಹೋಗುವ ರೋಗಿಗಳ ಹೊರೆ ತಪ್ಪಿದಂತಾಗಿದೆ. ನಗರ ಜನತೆ ಸದುಪಯೋಗ ಪಡೆದುಕೊಳ್ಳಬೇಕು. – ಡಾ. ಫಾರೂಕ್ ಅಹ್ಮದ್ ಮನೂರ್, ವ್ಯವಸ್ಥಾಪಕ ನಿರ್ದೇಶಕ.